ಕೊರೊನಾ ಲಸಿಕೆ ಕಂಡು ಹಿಡಿಯುವ ವಿಷ್ಯದಲ್ಲಿ ರಷ್ಯಾ ಮತ್ತೊಂದು ಶಾಕ್ ನೀಡಿದೆ. ರಷ್ಯಾ ಮತ್ತೊಂದು ಕೊರೊನಾ ಲಸಿಕೆ ಕಂಡು ಹಿಡಿದಿದೆ. ಆಗಸ್ಟ್ 11ರಂದು ಕೊರೊನಾ ಲಸಿಕೆ ಬಿಡುಗಡೆ ಮಾಡಿದ್ದ ರಷ್ಯಾ, ಕೊರೊನಾ ಲಸಿಕೆ ಕಂಡು ಹಿಡಿದ ವಿಶ್ವದ ಮೊದಲ ದೇಶವಾಗಿತ್ತು.
ವರದಿ ಪ್ರಕಾರ, ಮೊದಲ ಲಸಿಕೆಯ ಅಡ್ಡಪರಿಣಾಮಗಳು ಹೊಸ ಲಸಿಕೆ ಅನ್ವಯಿಸುವುದರಿಂದ ಕಡಿಮೆಯಾಗುತ್ತದೆ ಎಂದು ರಷ್ಯಾ ಹೇಳಿದೆ. ರಷ್ಯಾ ಮೊದಲ ಲಸಿಕೆಗೆ ಸ್ಪುಟ್ನಿಕ್ ವಿ ಎಂದು ಹೆಸರಿಟ್ಟಿತ್ತು. ಎರಡನೇ ಲಸಿಕೆಗೆ ರಷ್ಯಾ ಎಪಿವಾಕ್ ಕೊರೊನಾ ಎಂದು ಹೆಸರಿಟ್ಟಿದೆ.
ಸೈಬೀರಿಯಾದ ವಿಶ್ವ ದರ್ಜೆಯ ವೈರಾಲಜಿ ಸಂಸ್ಥೆಯಲ್ಲಿ ಈ ಲಸಿಕೆ ಸಿದ್ಧಪಡಿಸಲಾಗಿದೆ. ಎಪಿವಾಕ್ ಕೊರೊನಾ ಲಸಿಕೆಯ ಕ್ಲಿನಿಕಲ್ ಪ್ರಯೋಗ ಸೆಪ್ಟೆಂಬರ್‌ನಲ್ಲಿ ಪೂರ್ಣಗೊಳ್ಳಲಿದೆ. ಆದರೆ ಲಸಿಕೆ ಹಾಕಿದ 57 ಸ್ವಯಂಸೇವಕರಿಗೆ ಯಾವುದೇ ಅಡ್ಡಪರಿಣಾಮವಾಗಿಲ್ಲ. ಎಲ್ಲಾ ಸ್ವಯಂಸೇವಕರು ಆರೋಗ್ಯವಾಗಿದ್ದಾರೆ ಎಂದು ರಷ್ಯಾ ಹೇಳಿದೆ.