ಕೊರೊನಾ ವೈರಸ್ ಗೆ ಮೊದಲ ಬಾರಿ ಲಸಿಕೆ ಕಂಡು ಹಿಡಿದಿರುವ ರಷ್ಯಾ ಅದಕ್ಕೆ ‘ಸ್ಪುಟ್ನಿಕ್ ವಿ’ ಎಂದು ಹೆಸರಿಟ್ಟಿದೆ. ಕೊರೊನಾ ವೈರಸ್ ವಿರುದ್ಧ ಇಮ್ಯೂನಿಟಿ ಹೆಚ್ಚಿಸುವ ಈ ಲಸಿಕೆ ಬಗ್ಗೆ ಮಂಗಳವಾರ ಬೆಳಿಗ್ಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿಕೆ ನೀಡಿದ್ದರು.
ರಷ್ಯಾ (ಅಂದಿನ ಸೋವಿಯತ್ ಯೂನಿಯನ್ ಒಕ್ಕೂಟ) 1957ರ ಅಕ್ಟೋಬರ್ 4ರಂದು ಬಾಹ್ಯಾಕಾಶಕ್ಕೆ ಹಾರಿಬಿಟ್ಟಿದ್ದ ಮನುಕುಲದ ಪ್ರಥಮ ಕೃತಕ ಉಪಗ್ರಹ ಸ್ಪುಟ್ನಿಕ್ ಹೆಸರನ್ನು ಕೊರೊನಾ ಲಸಿಕೆಗೆ ಇಟ್ಟಿದೆ. ಒಂದು ಬಿಲಿಯನ್ ಡೋಸ್ ಲಸಿಕೆಗಾಗಿ ಈಗಾಗಲೇ 20 ದೇಶಗಳು ಬೇಡಿಕೆ ಸಲ್ಲಿಸಿವೆ ಎನ್ನಲಾಗ್ತಿದೆ. ಎರಡು ತಿಂಗಳಿಗಿಂತ ಕಡಿಮೆ ಸಮಯದಲ್ಲಿ ಲಸಿಕೆ ಕಂಡು ಹಿಡಿಯಲಾಗಿದೆ.
ಕೊರೊನಾ ಲಸಿಕೆ ನೋಂದಾಯಿಸಿದ ಮೊದಲ ದೇಶವೆಂಬ ಹೆಗ್ಗಳಿಕೆಗೆ ರಷ್ಯಾ ಪಾತ್ರವಾಗಿದೆ. ವ್ಲಾಡಿಮಿರ್ ಪುಟಿನ್ ಪುತ್ರಿ ಮೇಲೆ ಮೊದಲ ಪ್ರಯೋಗ ನಡೆದಿದೆ. ವಿಶ್ವ ಆರೋಗ್ಯ ಸಮಸ್ಯೆ ಲಸಿಕೆ ಬಗ್ಗೆ ಈ ಹಿಂದೆಯೇ ಅನುಮಾನ ವ್ಯಕ್ತಪಡಿಸಿತ್ತು. ರಷ್ಯಾ, ಲಸಿಕೆ ತಯಾರಿಕೆಗೆ ಸಂಬಂಧಿಸಿದ ಎಲ್ಲ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು.