ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಮರ್ಸಿ ಹೆಸರಿನ ಬಾಲಕಿಯೊಬ್ಬಳು ಸಿಯಾಟಲ್‌ನ ಮಕ್ಕಳ ಆಸ್ಪತ್ರೆಯೊಂದಕ್ಕೆ ತನ್ನ ಕೊನೆಯ ಕೆಮೋಥೆರಪಿಗೆಂದು ಹೋಗುವ ವೇಳೆ ಅಲ್ಲಿನ ಸ್ಥಳೀಯರು ಸೇರಿ ತನಗೆ ಚಿಯರ್ ಮಾಡಿದ್ದನ್ನು ಕಂಡು ಪುಳಕಿತಳಾಗಿದ್ದಾಳೆ.
ಸುಮಾರು 500 ಸ್ಥಳೀಯರು ಆಸ್ಪತ್ರೆಯ ದಾರಿಯ ಇಕ್ಕೆಲಗಳಲ್ಲಿ ನಿಂತು ಆಸ್ಪತ್ರೆಗೆ ಹೊರಟಿದ್ದ ಮರ್ಸಿಗೆ ನೈತಿಕ ಸ್ಥೈರ್ಯ ತುಂಬಲು ಹಾಜರಿದ್ದರು. ತನಗೆ ಸಿಕ್ಕ ಈ ಅಭೂತಪೂರ್ವ ಬೆಂಬಲಕ್ಕೆ ಕರಗಿ ಆನಂದಭಾಷ್ಪ ಸುರಿಸಿದ ಮರ್ಸಿಯ ಭಾವುಕ ಮುಖದ ಚಿತ್ರ ವೈರಲ್ ಆಗಿದೆ.
ಶಾಕಿಂಗ್: ಜೀವ ತೆಗೆದ ಗೋಡಂಬಿ, ಗಂಟಲಲ್ಲಿ ಗೋಡಂಬಿ ಬೀಜ ಸಿಲುಕಿ ಮಗು ಸಾವು
‘GoodNewsCorrespondent’ ಹೆಸರಿನ ಟ್ವಿಟರ್ ಪೇಜ್‌ನಲ್ಲಿ ಈ ಘಟನೆಯ ಕ್ಷಣಗಳ ಚಿತ್ರಗಳನ್ನು ಶೇರ್ ಮಾಡಲಾಗಿದೆ.
https://twitter.com/GoodNewsCorres1/status/1368942802730680322?ref_src=twsrc%5Etfw%7Ctwcamp%5Etweetembed%7Ctwterm%5E1368942802730680322%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Frooting-for-mercy-seattle-residents-line-up-to-cheer-for-the-girl-on-the-last-day-of-chemotherapy%2F731176