ಕೊರೊನಾ ಮೊದಲ ಅಲೆ ದೇಶದಲ್ಲಿದ್ದಾಗ ಸಾಮಾಜಿಕ ಅಂತರ ಕಾಪಾಡಲು ನೆರವಾಗುವಂತಹ ದೈತ್ಯ ಬೂಟುಗಳನ್ನ ತಯಾರಿಸಿದ್ದ ಅರೋಮೇನಿಯನ್ ಚಮ್ಮಾರ ಇದೀಗ ಕೊರೊನಾ ಎರಡನೇ ಅಲೆಯಿಂದ ಪಾರಾಗಲು ಚಳಿಗಾಲದ ಬೂಟನ್ನ ತಯಾರಿಸಿದ್ದಾರೆ.
ಗ್ರಿಗೋರ್ ಲುಪ್ ಎಂಬವರು ಮೇ ತಿಂಗಳಲ್ಲಿ ಯುರೋಪಿಯನ್ ಮಾನದಂಡದ 75 ನಂಬರಿನ ಬೂಟುಗಳನ್ನ ಮಾರುಕಟ್ಟೆಗೆ ಪರಿಚಯಿಸಿ ಸುದ್ದಿಯಾಗಿದ್ದರು. ಕೊರೊನಾದ ನಡುವೆಯೂ ಅನೇಕರು ಸಾಮಾಜಿಕ ಅಂತರ ಕಾಪಾಡೋದನ್ನೇ ಮರೆತುಬಿಡ್ತಾರೆ. ಹೀಗಾಗಿ ನಾನು ಈ ರೀತಿಯ ಪಾದರಕ್ಷೆಗಳನ್ನ ತಯಾರಿಸೋಕೆ ಆರಂಭಿಸಿದೆ. ಈ ಪಾದರಕ್ಷೆಗಳನ್ನ ಧರಿಸೋದ್ರಿಂದ ಜನರು ಕಡಿಮೆ ಅಂದರೂ ಎರಡೂ ಮೀಟರ್ ಅಂತರದಲ್ಲಿ ನಿಂತು ಸಂವಹನ ನಡೆಸ್ತಾರೆ ಅಂತಾ ಹೇಳಿದ್ರು.
ಇದೀಗ ಇದೇ ನಂಬರಿನ ಚಳಿಗಾಲದ ಬೂಟುಗಳನ್ನ ತಯಾರಿಸಿದ್ದಾರೆ ಗ್ರಿಗೋರ್ ಲೂಪ್. ಶೀತ ಪ್ರದೇಶದಲ್ಲಿ ಈ ಬೂಟು ಧರಿಸಿ ನೀವು ಆರಾಮಾಗಿ ನಡೆದಾಡಬಹುದಾಗಿದೆ, ಹಾಗೂ ಈ ಶೂಗಳ ಬೆಲೆ 150 ಯುರೋ ಅಂತಾ ಲುಪ್ ಮಾಹಿತಿ ನೀಡಿದ್ದಾರೆ.