alex Certify ಅಪ್ಘಾನಿಸ್ತಾನದ ಅಮೆರಿಕ ವಾಯುನೆಲೆ ಮೇಲೆ ರಾಕೆಟ್​ ದಾಳಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ಘಾನಿಸ್ತಾನದ ಅಮೆರಿಕ ವಾಯುನೆಲೆ ಮೇಲೆ ರಾಕೆಟ್​ ದಾಳಿ..!

ಅಫ್ಘಾನಿಸ್ತಾನದ ಪರ್ವಾನ್​ ಪ್ರಾಂತ್ಯದಲ್ಲಿರುವ ಅಮೆರಿಕದ ಪ್ರಮುಖ ವಾಯುನೆಲೆಯಾದ ಬಾಗ್ರಾಮ್​​ನಲ್ಲಿ ರಾಕೆಟ್​ ದಾಳಿ ನಡೆಸಲಾಗಿದೆ. ಅವಘಡದಲ್ಲಿ ಯಾವುದೇ ಸಾವು ನೋವುಗಳ ಬಗ್ಗೆ ಈವರೆಗೂ ವರದಿಯಾಗಿಲ್ಲ.

ಬೆಳಗ್ಗೆ 5:50ರ ಸುಮಾರಿಗೆ ಖಲಂದರ್ ಖಿಲ್​ ಪ್ರದೇಶದಿಂದ ರಾಕೆಟ್​ಗಳನ್ನ ಬಾಗ್ರಾಮ್​ ವಾಯುನೆಲೆಗೆ ಹಾರಿಸಲಾಗಿದೆ ಎಂದು ಪ್ರಾಂತೀಯ ವಕ್ತಾರರು ಮಾಹಿತಿ ನೀಡಿದ್ದಾರೆ. ಇದರಲ್ಲಿ ಏಳು ರಾಕೆಟ್​​ಗಳು ದಾಳಿ ನಡೆಸುವಲ್ಲಿ ವಿಫಲವಾಗಿವೆ. ಅಪಘಾನ್ ಭದ್ರತಾ ಪಡೆ ಇದನ್ನ ನಿಷ್ಕ್ರಿಯಗೊಳಿಸಿದೆ ಎಂದು ಮಾಹಿತಿ ನೀಡಲಾಗಿದೆ.

ಅಪಘಾನ್​ ರಾಜಧಾನಿ ಕಾಬೂಲ್​ನಿಂದ ಉತ್ತರಕ್ಕೆ 50 ಕಿಲೋಮೀಟರ್​ ದೂರದಲ್ಲಿರುವ ಬಾಗ್ರಾಮ್​ ವಾಯುನೆಲೆ ಕಳೆದ 19 ವರ್ಷಗಳಿಂದ ಅಫ್ಘಾನಿಸ್ತಾನದ ಪ್ರಮುಖ ಅಮೆರಿಕ ಹಾಗೂ ನ್ಯಾಟೋ ಮಿಲಿಟರಿ ನೆಲೆಯಾಗಿ ಕಾರ್ಯನಿರ್ವಹಿಸುತ್ತಿದೆ.

ಯಾವುದೇ ಗುಂಪು ಈವರೆಗೆ ದಾಳಿಯ ಹೊಣೆಯನ್ನ ಹೊತ್ತುಕೊಂಡಿಲ್ಲ. ಕೆಲ ಸಮಯದಿಂದ ಅಪ್ಘಾನಿಸ್ತಾನದಲ್ಲಿ ರಾಕೆಟ್​ ದಾಳಿ ನಡೆಯುತ್ತಲೇ. ಡಿಸೆಂಬರ್​ 12ರಂದು ಕಾಬೂಲ್​ನ ವಿವಿಧ ಭಾಗಗಳಿಂದ 10 ರಾಕೆಟ್​ಗಳನ್ನ ಹಾರಿಸಲಾಗಿತ್ತು. ಈ ದಾಳಿಯಲ್ಲಿ ಓರ್ವ ಸಾವನ್ನಪ್ಪಿದ್ರೆ ಇನ್ನೂ ಇಬ್ಬರು ಗಾಯಗೊಂಡಿದ್ದರು.

ನವೆಂಬರ್ 21ರಂದು ನಗರದ ವಿವಿಧ ಭಾಗಗಳಿಂದ 23 ರಾಕೆಟ್​ಗಳನ್ನ ಹಾರಿಸಲಾಗಿದ್ದು 8 ನಾಗರಿಕರು ಸಾವಿಗೀಡಾಗಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...