ಕಳ್ಳರಿಗೂ ಕೆಲವೊಮ್ಮೆ ಮಾನವೀಯತೆ ಬಂದುಬಿಡಬಹುದು ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ. ಪಾಕಿಸ್ತಾನದಲ್ಲಿ ಡೆಲಿವರಿ ಬಾಯ್ ನನ್ನು ದೋಚಲು ಬಂದ ಕಳ್ಳರಿಬ್ಬರು ಕಣ್ಣೀರಿಗೆ ಕರಗಿ ಬರಿಗೈಲಿ ವಾಪಸಾದ ವಿಡಿಯೋ ವೈರಲ್ ಆಗಿದೆ.
ಡೆಲಿವರಿ ಬಾಯ್ ಗ್ರಾಹಕರಿಗೆ ವಿತರಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾಗ ಬೈಕ್ ನಲ್ಲಿ ಬಂದ ಇಬ್ಬರು ಏಕಾಏಕಿ ಅಡ್ಡಗಟ್ಟಿ ಬೆದರಿಕೆ ಹಾಕಿದರು. ಡೆಲಿವರಿ ಬಾಯ್ ತನ್ನಲ್ಲಿದ್ದ ಹಣ, ಪ್ಯಾಕೇಜ್ ಅನ್ನು ಖದೀಮರಿಗೆ ನೀಡಿ ಶರಣಾದ. ಅಷ್ಟರಲ್ಲಿ ಆತನ ಕಣ್ಣಲ್ಲಿ ನೀರು ಹರಿಯಲಾರಂಭಿಸಿದೆ.
ಇದನ್ನು ನೋಡಿದ ರಾಬರಿ ಮಾಡಲು ಬಂದವರಿಗೆ ಏನನಿಸಿತೋ ಏನೋ ಆತನನ್ನು ಬೆನ್ನುತಟ್ಟಿ ಸಮಾಧಾನಪಡಿಸಿ ತಾವು ವಸೂಲಿ ಮಾಡಿದ್ದೆಲ್ಲವನ್ನೂ ಹಿಂದಿರುಗಿಸಿದರು. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.