ಕಳೆದ ಒಂದು ವರ್ಷದಿಂದ ಎಲ್ಲೆಲ್ಲೂ ಕೋವಿಡ್-19 ಸೋಂಕಿನದ್ದೇ ಸುದ್ದಿಯಾಗಿದೆ. ವೈದ್ಯಕೀಯ ಲೋಕದಲ್ಲಂತೂ ಈ ವೈರಾಣುವಿನ ಬಗ್ಗೆಯೇ ಅಧ್ಯಯನ ಹಾಗೂ ಸಂಶೋಧನೆಗಳು ಎಂಬಂತಾಗಿಬಿಟ್ಟಿದೆ.
ಈಜುಕೊಳದಿಂದ ಕೊರೊನಾ ವೈರಸ್ ಹಬ್ಬುವ ಸಾಧ್ಯತೆಗಳು ಬಹಳ ಕಡಿಮೆ ಎಂದು ಲಂಡನ್‌ನ ಇಂಪೀರಿಯಲ್ ಕಾಲೇಜಿನ ವೈರಾಲಜಿ ವಿಭಾಗದ ಸಂಶೋಧಕರ ತಂಡವೊಂದು ತಿಳಿಸಿದೆ. ಕೋವಿಡ್ ವೈರಾಣುವಿನ ಮೇಲೆ ಈಜುಕೊಳದ ಪ್ರಭಾವದ ಕುರಿತು ಈ ತಂಡ ಅಧ್ಯಯನ ಮಾಡಿದೆ.
ಸ್ವಿಮ್ಮಿಂಗ್ ಪೂಲ್‌ನ ನೀರನ್ನು ಸ್ವಚ್ಛಗೊಳಿಸಲು ಬಳಸುವ ಕ್ಲೋರಿನ್‌ನಲ್ಲಿ 1.5 ಮಿಗ್ರಾಂ ಸ್ಯಾಂಪಲ್‌ನಲ್ಲಿ 7-7.2ರಷ್ಟು ಪಿಎಚ್ ಇದ್ದು, ಅರ್ಧ ನಿಮಿಷದ ಒಳಗೆ ಇದು ಕೋವಿಡ್ ವೈರಸ್‌ನ ಆಯುಷ್ಯವನ್ನು 1000 ಪಟ್ಟು ಕಡಿಮೆ ಮಾಡಬಲ್ಲದು ಎಂದು ಈ ಅಧ್ಯಯನ ತಿಳಿಸಿದೆ. ಸಂಶೋಧನೆಯಲ್ಲಿ ಭಾಗಿಯಾಗಿದ್ದ ಪ್ರೊಫೆಸರ್ ವೆಂಡಿ ಬಾರ್ಕ್ಲೆ ಮಾತನಾಡಿ, “ಸಂಸ್ಥೆಯ ಹೈ-ಕಂಟೇನ್ಮೆಂಟ್ ಪ್ರಯೋಗಾಲಯಗಳಲ್ಲಿ ಈ ಪ್ರಯೋಗವನ್ನು ಸಂಪೂರ್ಣ ಸುರಕ್ಷಿತವಾದ ಹಾಗೂ ನಿಯಂತ್ರಿತವಾದ ವಾತಾವರಣದಲ್ಲಿ ಮಾಡಲಾಗಿದೆ” ಎಂದಿದ್ದಾರೆ.
ಇಲಿ ತಿಂದ ‘ಪ್ರಸಾದ’ವನ್ನು ಸೇವಿಸಿದ್ರೆ ದೂರವಾಗುತ್ತಂತೆ ರೋಗ…..!
ಕೊರೊನಾ ವೈರಾಣುಗಳನ್ನು ಕ್ಲೋರಿನ್‌ಯುಕ್ತ ನೀರಿನಲ್ಲಿ ಹಾಕಿದ 30 ಸೆಕೆಂಡ್‌ಗಳಲ್ಲಿ ವೈರಾಣುಗಳು ತಮ್ಮ ಕ್ಷಮತೆಯನ್ನು ಬಹುವಾಗಿ ಕಳೆದುಕೊಂಡಿವೆ ಎಂಬುದನ್ನು ಸಂಶೋಧನಾ ತಂಡ ಕಂಡುಕೊಂಡಿದೆಯಂತೆ.
ಹೀಗಾಗಿ ಈಜುಕೊಳದಲ್ಲಿ ಕೋವಿಡ್-19 ಸೋಂಕಿತ ವ್ಯಕ್ತಿಯೊಬ್ಬನಿಂದ ಮತ್ತೊಬ್ಬ ವ್ಯಕ್ತಿಗೆ ಈ ವೈರಾಣುಗಳು ಪಸರುವ ಸಾಧ್ಯತೆ ಬಹಳ ವಿರಳ ಎಂಬುದು ತಂಡದ ಮಾತು.