ಅರ್ಜೆಂಟಿನಾ ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಬುಧವಾರ ನಿಧನರಾದ ಬಳಿಕ ಅವರಿಗೆ ಶ್ರದ್ಧಾಂಜಲಿಯ ಮಹಾಪೂರವೇ ಹರಿದುಬಂದಿದೆ.
ಮರಡೋನಾರ ಅಕಾಲಿಕ ಮರಣದಿಂದಾಗಿ ಟ್ವಿಟರ್‌ನಲ್ಲಿ ಅವರ ಹೆಸರು ಟ್ರೆಂಡ್ ಆಗುತ್ತಿದೆ. ಇದೇ ವೇಳೆ, ಮರಡೋನಾ ಹೆಸರಿನಂತೆಯೇ ಕೇಳುವ ಗಾಯಕಿ ಮಡೊನ್ನಾ ಹೆಸರು ಸಹ ಸದ್ದು ಮಾಡುತ್ತಿದೆ. ಕೆಲವು ನೆಟ್ಟಿಗರಂತೂ ಮಡೊನ್ನಾರೇ ನಿಧನರಾಗಿದ್ದಾರೆ ಎಂದುಕೊಂಡು ಬಿಟ್ಟಿದ್ದಾರೆ.
ಈ ಕಾರಣದಿಂದ ಪಾಪ್ ಕ್ವೀನ್ ಮಡೊನ್ನಾ ಇನ್ನಿಲ್ಲವಾಗಿದ್ದಾರೆ ಎಂದೇ ನೆಟ್ಟಿಗ ಸಮುದಾಯ ಭಾವಿಸುವಂತೆ ಆಗಿ, ಅವರ ಹೆಸರಿನಲ್ಲಿ ಶ್ರದ್ಧಾಂಜಲಿಯ ಅನೇಕ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ತೇಲಾಡುತ್ತಿದ್ದವು.
https://twitter.com/HSax98/status/1331635443629166595?ref_src=twsrc%5Etfw%7Ctwcamp%5Etweetembed%7Ctwterm%5E1331635443629166595%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Frip-madonna-trends-online-after-twitter-users-mistake-her-for-maradona-1744385-2020-11-26