ಕೋವಿಡ್-19 ಕಾರಣದಿಂದ ಕಳೆಗಟ್ಟಿದ್ದ ಬ್ರೆಜಿಲ್‌ನ ರಯೋ ಡಿ ಜನೈರೋದ ಸಾಂಬಾ ದೃಶ್ಯಾವಳಿಗಳು ನಿಧಾನವಾಗಿ ಹಿಂದಿನ ವೈಭವಕ್ಕೆ ಮರಳುವ ಸೂಚನೆಗಳನ್ನು ತೋರುತ್ತಿವೆ.
ಆಫ್ರೋ-ಬ್ರೆಜಿಲ್ ಸಂಗೀತದ ಯಾನರ್ ಆಗಿರುವ ಈ ಸಾಂಬಾ ಸಂಗೀತವು ಅನೇಕ ಸ್ಟಾರ್‌ಗಳನ್ನು ಹುಟ್ಟು ಹಾಕಿದೆ. ಸಾಂಬಾ ಸ್ಟಾರ್ ಮೋಸಿರ್ ಲುಝ್ ಇತ್ತೀಚೆಗೆ ನಗರದ ಬೀದಿಗಳಲ್ಲಿ ಕೋವಿಡ್-19 ಸಂಬಂಧ ಜಾಗೃತಿ ಮೂಡಿಸಲು ಹಮ್ಮಿಕೊಂಡಿರುವ ’ವರ್ಕರ್ಸ್ ಸಾಂಬಾ’ ಕಾರ್ಯಕ್ರಮದಲ್ಲಿ ಜನರು ಸೇರಿದ್ದರು.
ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ತಗ್ಗುತ್ತಿರುವ ಹಿನ್ನೆಲೆಯಲ್ಲಿ ಭಾರತದಂತೆ ಬ್ರೆಜಿಲ್‌ನಲ್ಲೂ ಸಹ ಹಂತ ಹಂತವಾಗಿ ಅನ್‌ಲಾಕ್ ಪ್ರಕ್ರಿಯೆಗೆ ಚಾಲನೆ ಕೊಡಲಾಗುತ್ತಿದೆ.
ಪ್ರತಿ ವರ್ಷ ರಯೋ ಡಿ ಜನೈರೋದ ಸಾಂಬಾಡ್ರೋಮ್‌ನಲ್ಲಿ 13 ಸಾಂಬಾ ಶಾಲೆಗಳು ಪರೇಡ್ ಮಾಡಲಿದ್ದು, ಒಮ್ಮೆಲೆ 90 ಸಾವಿರದಷ್ಟು ಪ್ರೇಕ್ಷಕರು ಈ ಉತ್ಸವದಲ್ಲಿ ಭಾಗಿಯಾಗಲಿದ್ದಾರೆ. ಆದರೆ ಕೋವಿಡ್-19 ಕಾರಣದಿಂದ ಈ ಬಾರಿ ಸಾಂಬಾ ಉತ್ಸವವನ್ನು ಮುಂದೂಡಲಾಗಿದೆ.