alex Certify ಬರೋಬ್ಬರಿ ನಾಲ್ಕು ದಶಕಗಳ ಬಳಿಕ ಕಣ್ಣಿನ ದೃಷ್ಟಿ ವಾಪಸ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ ನಾಲ್ಕು ದಶಕಗಳ ಬಳಿಕ ಕಣ್ಣಿನ ದೃಷ್ಟಿ ವಾಪಸ್​

ಕಳೆದ ನಾಲ್ಕು ದಶಕಗಳಿಂದ ಅಂಧನಾಗಿ ಜೀವನ ನಡೆಸುತ್ತಿದ್ದ 58 ವರ್ಷದ ವ್ಯಕ್ತಿಯೊಬ್ಬ ಲೈಟ್​ ಆಕ್ಟಿವೆಟೇಡ್​ ಥೆರಪಿ ಮೂಲಕ ತಮ್ಮ ಒಂದು ಕಣ್ಣಿನಲ್ಲಿ ಭಾಗಶಃ ದೃಷ್ಟಿಯನ್ನ ವಾಪಸ್​ ಪಡೆದಿದ್ದಾರೆ.

ಸುಮಾರು 40 ವರ್ಷಗಳ ಹಿಂದೆ ರೋಗಿಗೆ ನ್ಯೂರೋ ಡಿಜೆನೆರೆಟಿವ್​ ಕಣ್ಣಿನ ಕಾಯಿಲೆ ಬಂದಿತ್ತು. ಇದು ರೆಟಿನಾದ ಮೇಲೆ ಪರಿಣಾಮ ಬೀರೋದ್ರಿಂದ ದೃಷ್ಟಿಯನ್ನ ಕಳೆದುಕೊಂಡಿದ್ದರು.

ಆದರೆ ಇದೀಗ ಲೈಟ್​ ಆಕ್ಟಿವೆಟೇಡ್​ ಚಿಕಿತ್ಸೆ ಮೂಲಕ ಒಂದು ಕಣ್ಣಿನಲ್ಲಿ ಭಾಗಶಃ ದೃಷ್ಟಿಯನ್ನ ವಾಪಸ್​ ಪಡೆದಿದ್ದಾರೆ. ವಿಶೇಷ ಕನ್ನಡಕವನ್ನ ಧರಿಸಿದ ಬಳಿಕ ಇದೀಗ ಕೆಲ ಬಣ್ಣಗಳನ್ನ ಗುರುತಿಸುವ ಸಾಮರ್ಥ್ಯ ಪಡೆದಿದ್ದಾರೆ.

ರೆಟಿನೈಟಿಸ್ ಪಿಗ್ಮೆಂಟೋಸಾ ಅಥವಾ ಆರ್​ಪಿ ಎಂಬುದು ಸಾಮಾನ್ಯ ಕಣ್ಣಿನ ಕಾಯಿಲೆಯಾಗಿದೆ. ಇದರಿಂದ ಬ್ರಿಟನ್​ನ 4000ಕ್ಕೂ ಹೆಚ್ಚು ಮಂದಿ ಬಳಲುತ್ತಿದ್ದಾರೆ. ಆರ್​ಪಿ ಕಾಯಿಲೆಗೆ ಈ ಥೆರಪಿಯು ಮಾನ್ಯತೆ ಪಡೆದಿದ್ದಲ್ಲ.

ಈ ಥೆರಪಿಯನ್ನ ಪಡೆಯುವ ಮುನ್ನ ರೋಗಿಗೂ ಕೆಲ ತರಬೇತಿಗಳನ್ನ ನೀಡಲಾಗುತ್ತೆ. ಸಾಕಷ್ಟು ತಿಂಗಳುಗಳ ತರಬೇತಿಯ ಬಳಿಕ ಈ ವ್ಯಕ್ತಿಯಲ್ಲಿ ಸಕಾರಾತ್ಮಕ ಫಲಿತಾಂಶ ಲಭ್ಯವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...