ರೆಸ್ಟೋರೆಂಟ್, ಜಿಮ್ ಹಾಗೂ ಹೋಟೆಲ್ಗಳ ಪುನಾರಂಭದಿಂದಲೇ ವಿಶ್ವದಲ್ಲಿ ಕೊರೊನಾ ಸೋಂಕು ಹೆಚ್ಚಾಗಿದೆ ಎಂಬ ಆಘಾತಕಾರಿ ಅಂಶ ಅಧ್ಯಯನವೊಂದರಲ್ಲಿ ಬಯಲಾಗಿದೆ. ಸುಮಾರು 98 ದಶಲಕ್ಷ ಜನರ ಮೊಬೈಲ್ ಫೋನ್ ಡೇಟಾ ಆಧರಿಸಿ ಈ ಮಾಹಿತಿಯನ್ನ ಸಂಗ್ರಹಿಸಲಾಗಿದೆ.
ಸ್ಟ್ಯಾನ್ ಫೋಡ್ ವಿಶ್ವವಿದ್ಯಾಲಯ ಹಾಗೂ ವಾಯುವ್ಯ ವಿಶ್ವವಿದ್ಯಾಲಯ ಸಂಶೋಧಕರು ಅಮೆರಿಕದ ನಗರದಾದ್ಯಂತ ಜನರ ಚಲನವಲನದ ಮೇಲೆ ನಿಗಾ ಇಟ್ಟಿತು. ಅವರು ನೆರೆಹೊರೆಯವರನ್ನ ಹೆಚ್ಚಾಗಿ ಎಲ್ಲಿ ಭೇಟಿ ಮಾಡ್ತಾರೆ ಹಾಗೂ ಈ ವೇಳೆ ಕೊರೊನಾ ಹೇಗೆ ಹರಡುತ್ತೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಯ್ತು.
ಉದಾಹರಣೆಗೆ ಚಿಕಾಗೋದಲ್ಲಿ ರೆಸ್ಟೋರೆಂಟ್ಗಳನ್ನ ಮತ್ತೆ ಮೊದಲಿನಂತೆ ತೆರೆದರೆ ಅದು 600000 ಸೋಂಕಿತರನ್ನ ಹುಟ್ಟು ಹಾಕುತ್ತೆ. ಇದು ಬೇರೆ ಕಡೆ ಕೊರೊನಾ ಹರಡುವ ಸಂಖ್ಯೆಗಿಂತ ಮೂರು ಪಟ್ಟು ಹೆಚ್ಚಿನ ಸಂಖ್ಯೆಯಾಗಿದೆ. ಇನ್ನು ಇದರ ಜೊತೆಯಲ್ಲಿ ಮಾಸ್ಕ್ ಬಳಕೆ ಹಾಗೂ ಸಾಮಾಜಿಕ ಅಂತರ ಪಾಲನೆ ಸೋಂಕು ನಿಯಂತ್ರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತೆ ಅಂತಾ ಸಂಶೋಧನೆ ಹೇಳಿದೆ.