ಫಿಲಿಪೈನ್ಸ್ ನಲ್ಲಿ ಬ್ಯೂಟಿ ಕ್ವೀನ್ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಲಾಗಿದೆ. ಹೊಟೇಲ್ ಬಾತ್ ರೂಮಿನಲ್ಲಿ ಆಕೆ ಶವ ಪತ್ತೆಯಾಗಿದೆ. ಪ್ರಾಥಮಿಕ ತನಿಖೆ ವೇಳೆ ಸಾಮೂಹಿಕ ಅತ್ಯಾಚಾರವೆಸಗಿ ಹತ್ಯೆ ಮಾಡಿರುವುದು ಬಹಿರಂಗವಾಗಿದೆ. ಮೃತ ಬ್ಯೂಟಿ ಕ್ವೀನ್ ಹೆಸರು ಕ್ರಿಸ್ಟೀನ್.
23 ವರ್ಷದ ಕ್ರಿಸ್ಟೀನ್ ಫಿಲಿಪೈನ್ಸ್ ಏರ್ಲೈನ್ಸ್ ಫ್ಲೈಟ್ ನಲ್ಲಿ ಅಟೆಂಡರ್ ಆಗಿ ಕೆಲಸ ಮಾಡ್ತಿದ್ದಳು. ಬಾತ್ ರೂಮ್ ಸ್ನಾಚ ತೊಟ್ಟಿಯಲ್ಲಿ ಆಕೆ ಶವ ಸಿಕ್ಕಿದೆ. ಕ್ರಿಸ್ಟೀಲ್ ದೇಹದ ಮೇಲೆ ಸಾಕಷ್ಟು ಗಾಯಗಳಿವೆ ಎಂದು ಪೊಲೀಸರು ಹೇಳಿದ್ದಾರೆ. ಮರಣೋತ್ತರ ಪರೀಕ್ಷೆ ನಂತ್ರ ಹತ್ಯೆ ಬಗ್ಗೆ ಇನ್ನಷ್ಟು ಸ್ಪಷ್ಟ ಮಾಹಿತಿ ಹೊರಗೆ ಬರಲಿದೆ.
ಕ್ರಿಸ್ಟೀನ್ ದಾವೊ ನಗರದಲ್ಲಿ ಜನಿಸಿದ್ದಳು. 2017ರಲ್ಲಿ ಮಿಸ್ ಸಿಲ್ವಾ ದಾವೊ ರನ್ನರ್ ಅಪ್ ಆಗಿದ್ದಳು. ಪ್ರಕರಣಕ್ಕೆ ಸಂಬಂಧಿಸಿದಂತೆ 11 ಮಂದಿ ವಿರುದ್ಧ ದೂರು ದಾಖಲಿಸಿಕೊಂಡಿರುವ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಉಳಿದವರ ಬಂಧನಕ್ಕೆ ಬಲೆ ಬೀಸಿದ್ದಾರೆ. ಕ್ರಿಸ್ಟೀನ್ ಹತ್ಯೆ ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.