ಕೊರೊನಾ ವೈರಸ್ ನಿಯಂತ್ರಣಕ್ಕೆ ಒಂದು ಕಡೆ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಡೆದಿದೆ. ಇನ್ನೊಂದು ಕಡೆ ಮೇಲ್ಭಾಗದಲ್ಲಿರುವ ವೈರಸ್ ಹೊಡೆದೋಡಿಸುವುದು ಹೇಗೆ ಎಂಬ ಬಗ್ಗೆ ಪ್ರಯೋಗಗಳು ನಡೆಯುತ್ತಿವೆ. ಸಾಮಾನ್ಯವಾಗಿ ವೈರಸ್ ತಡೆಗೆ ಸ್ಯಾನಿಟೈಜರ್ ಬಳಸಲಾಗ್ತಿದೆ. ಈಗ ಖುಷಿ ಸುದ್ದಿಯೊಂದು ಸಿಕ್ಕಿದೆ.
ಸಂಶೋಧಕರು ಮೇಲ್ಮೈ ಲೇಪನವನ್ನು ಅಭಿವೃದ್ಧಿಪಡಿಸಿದ್ದಾರೆ. ಡಾರ್ಕ್ ಬಾಬ್ಗಳು ಅಥವಾ ಲೈಟ್ ಸ್ವಿಚ್ಗಳಂತಹ ಸಾಮಾನ್ಯ ವಸ್ತುಗಳ ಮೇಲೆ ಹಾಕಿದಾಗ ಒಂದು ಗಂಟೆಯಲ್ಲಿ ವೈರಸ್ ನಿಷ್ಕ್ರಿಯಗೊಳ್ಳುತ್ತದೆ. ಪರೀಕ್ಷೆ ಫಲಿತಾಂಶ ಅತ್ಯುನ್ನತವಾಗಿದೆ.
ಎಸಿಎಸ್ ಅಪ್ಲೈಡ್ ಮೆಟೀರಿಯಲ್ಸ್ ಮತ್ತು ಇಂಟರ್ಫೇಸ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಗಾಜಿನ ಅಥವಾ ಸ್ಟೇನ್ಲೆಸ್ ಸ್ಟೀಲ್ ಮೇಲೆ ಹಾಕಿದಾಗ ವೈರಸ್ ಕೊಲ್ಲಲ್ಪಡುತ್ತದೆ. ಒಂದು ಗಂಟೆಯಲ್ಲಿ ವೈರಸ್ನ ಪ್ರಮಾಣವು ಶೇಕಡಾ 99.9ರಷ್ಟು ಕಡಿಮೆಯಾಗುತ್ತದೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ.