alex Certify ʼಕೊರೊನಾʼ ಸಾಂಕ್ರಾಮಿಕ ಟ್ರ್ಯಾಕ್​ ಮಾಡುತ್ತೆ ಸೇಫ್​ ಬ್ಲೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼ ಸಾಂಕ್ರಾಮಿಕ ಟ್ರ್ಯಾಕ್​ ಮಾಡುತ್ತೆ ಸೇಫ್​ ಬ್ಲೂಸ್

ವೈರಸ್​​ನ ಹೆಸರು ಕೇಳಿದ್ರೆ ಸಾಕು ಜನರು ಭಯ ಬೀಳೋವಂತ ಪರಿಸ್ಥಿತಿ ಎದುರಾಗಿದೆ. ಆದರೆ ವಿಜ್ಞಾನಿಗಳು ಇದೀಗ ಹೊಸದೊಂದು ವೈರಸ್​ನ್ನು ಕಂಡು ಹಿಡಿದಿದ್ದು, ಇದರ ಸಹಾಯದಿಂದ ಕೊರೊನಾದಂತಹ ವೈರಸ್​ಗಳ ಬಗ್ಗೆ ಬ್ಲೂ ಟೂತ್​​ ಸಹಾಯದಿಂದ ಜನರು ಬಹುಬೇಗನೇ ಅಲರ್ಟ್​ ಆಗಬಹುದಾಗಿದೆ.

ಈ ವಿಶೇಷ ವೈರಸ್​ಗೆ ಸೇಫ್​ ಬ್ಲೂಸ್​ ಎಂದು ಹೆಸರಿಡಲಾಗಿದೆ. ಇದು ಕೊರೊನಾ ಟ್ರ್ಯಾಕಿಂಗ್​​ನ ಕೆಲಸವನ್ನ ಮಾಡುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಅಲ್ಲದೇ ಈ ವೈರಸ್​​ನಿಂದ ನಿಮ್ಮ ಮೊಬೈಲ್​​ಗೆ ಯಾವುದೇ ಹಾನಿ ಉಂಟಾಗೋದಿಲ್ಲ.

ಅಮೆರಿಕ ಯೂನಿವರ್ಸಿಟಿ ಆಫ್​ ಕ್ವೀನ್​ಲ್ಯಾಂಡ್ , ಮೆಲ್ಬರ್ನ್​ ವಿಶ್ವವಿದ್ಯಾಲಯ ಹಾಗೂ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಶೋಧಕರು ಸಂಯುಕ್ತ ರೂಪದಲ್ಲಿ ಈ ವರ್ಚುವಲ್​​ ವೈರಸ್​​​ನ್ನು ನಿರ್ಮಾಣ ಮಾಡಿದ್ದಾರೆ. ಸೇಫ್​ ಬ್ಲೂಸ್​ ಸರ್ವರ್​​​ನಲ್ಲಿ ಯಾವುದೇ ಡೇಟಾವನ್ನ ಸಂಗ್ರಹ ಮಾಡೋದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಈ ವೈರಸ್​​ ಸಾಮಾಜಿಕ ಅಂತರ ಅನುಸರಿಸಲಾಗುತ್ತಿದೆಯೇ ಎಂದು ನಿಖರವಾಗಿ ಹೇಳಬಲ್ಲದು. ಅಲ್ಲದೇ ಜನಸಂದಣಿ , ಸಮಾರಂಭಗಳನ್ನ ಸ್ವಯಂ ಚಾಲಿತವಾಗಿ ಪತ್ತೆ ಮಾಡುತ್ತದೆ. ಈ ವೈರಸ್​ ಬ್ಲೂಟೂತ್​ ಮೂಲಕ ಕಾರ್ಯನಿರ್ವಹಿಸಬಲ್ಲದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...