ಭೂಮಿಯಲ್ಲಿ ಜನಸಂಖ್ಯೆ ಹೆಚ್ಚಾದಂತೆ ನೈಸರ್ಗಿಕ ಸಂಪನ್ಮೂಲಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಸಲಾಗುತ್ತದೆ. ಅದರಲ್ಲೂ ನೀರಿನ ಬಳಕೆ ಹೆಚ್ಚಾದಂತೆ ಕಲುಷಿತ ಪ್ರಮಾಣವೂ ಹೆಚ್ಚಾಗಿದೆ.
ಇದೀಗ ಅಮೆರಿಕಾದ ರೋಚೆಸ್ಟರ್ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಕಲುಷಿತ ನೀರನ್ನು ಹೊಸ ಸೌರ ತಂತ್ರಜ್ಞಾನದ ಮೂಲಕ ಸ್ವಚ್ಛಗೊಳಿಸುವ ಸಾಧನ ಕಂಡುಹಿಡಿದಿದ್ದಾರೆ.
ನೇಚರ್ ಸಸ್ಟೈನಬಲಿಟಿ ಜರ್ನಲ್ ನಲ್ಲಿ ಹೊಸ ಸಂಶೋಧನೆಯನ್ನು ಪ್ರಕಟಿಸಿದ್ದು, ಅಲ್ಯುಮಿನಿಯಂ ಪ್ಯಾನಲ್ ಕಾರ್ಯ ವಿಧಾನದ ಬಳಕೆ ಬಗ್ಗೆ ವಿವರಿಸಿದ್ದಾರೆ.
ಸೋಲಾರ್ ಪ್ಯಾನಲ್ ಹೊಂದಿನ ಹೊಸ ಸಾಧನವನ್ನು ನೀರಿನೊಳಗೆ ಸೂರ್ಯನ ದಿಕ್ಕಿಗೆ ಮುಖ ಮಾಡಿ ಮುಳುಗಿಸಿ ಇಟ್ಟಲ್ಲಿ, ಅಲ್ಯುಮಿನಿಯಂ ಪದರವು ಸೂರ್ಯನಿಂದ ಹೀರಿಕೊಳ್ಳುವ ನೀರನ್ನು ಬಿಸಿ ಮಾಡುತ್ತದೆ. ನೀರಿನ ಅಂತರ – ಅಣು ಬಂಧವನ್ನು ಬದಲಿಸಲಿದೆ. ಆವಿಯಾದ ನೀರನ್ನು ಮಾಲಿನ್ಯವಿಲ್ಲದೆ ಘನೀಕರಣಕ್ಕೆ ಇರಿಸಲಾದ ಮತ್ತೊಂದು ಪಾರದರ್ಶಕ ಸ್ವಚ್ಛ ಪಾತ್ರೆಯಲ್ಲಿ ಸಂಗ್ರಹಿಸಲಾಗುತ್ತದೆ. ಹೀಗೆ ಮಾಡುವುದರಿಂದ ಅನಗತ್ಯ ಮಾಲಿನ್ಯಕಾರಕಗಳನ್ನು ಕಡಿಮೆ ಮಾಡಿ ನೀರಿನ ಕಲುಷಿತತೆ ಕಡಿಮೆ ಮಾಡಬಹುದು.