ಅಮೆರಿಕದ ಉತ್ತರ ಕರೋಲಿನಾ ರಾಜ್ಯದಲ್ಲಿ, 30 ಅಡಿ ಆಳದ ಚರಂಡಿ ಗುಂಡಿಯೊಳಗೆ ಸಿಲುಕಿದ್ದ ನಾಯಿಯೊಂದನ್ನು ಕಂಡ ಬೈಕರ್‌ಗಳು ಅದನ್ನು ರಕ್ಷಿಸಿದ ಘಟನೆ ಜರುಗಿದೆ.
ಇಲ್ಲಿನ ಆಸೆವಿಲ್ಲೆ ಬಳಿಯ ಪಿಸ್ಗಾ ರಾಷ್ಟ್ರೀಯ ಉದ್ಯಾನದ ಆ ಗುಂಡಿಯಲ್ಲಿ ಕೆಲ ದಿನಗಳಿಂದ ಸಿಲುಕಿಕೊಂಡು ಹೈರಾಣಾಗಿದ್ದ ನಾಯಿಯನ್ನು ಮೇಲೆತ್ತಲಾಗಿದೆ. ಬೈಕರ್‌ಗಳ ಬಳಿ ನಾಯಿಯನ್ನು ಮೇಲೆತ್ತಲು ಸರಿಯಾದ ಸಲಕರಣೆಗಳು ಇರಲಿಲ್ಲ. ಸುತ್ತಮುತ್ತ ಇದ್ದ ಜನರನ್ನು ಸಹಾಯಕ್ಕೆ ಕರೆದ ಬೈಕರ್ ಗಳು, ರಕ್ಷಣಾ ಕಾರ್ಯಕರ್ತರನ್ನು ಸ್ಥಳಕ್ಕೆ ಕರೆತಂದಿದ್ದಾರೆ.
ನಂತರ ಹಗ್ಗದ ನೆರವಿನಿಂದ ನಾಯಿಯನ್ನು ಸುರಕ್ಷಿತವಾಗಿ ಮೇಲಕ್ಕೆ ಎತ್ತಲಾಗಿದೆ. ಹಗ್ಗದತ್ತ ನಾಯಿಯನ್ನು ಸೆಳೆಯಲು ತಿಂಡಿಯನ್ನು ಬಳಸಲಾಗಿದೆ. ಕೊನೆಗೂ ಹರಸಾಹಸ ಮಾಡಿ ಮೇಲಕ್ಕೆ ಎತ್ತಲಾದ ನಾಯಿಯ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳಲಾಗಿದೆ.
https://www.facebook.com/permalink.php?story_fbid=3390788291029387&id=1582904668484434