ಇಟಲಿಯ ರೋಮ್ ನ ಸುಪ್ರಸಿದ್ಧ ಚಿತ್ರ ಕಲಾವಿದರಾಗಿದ್ಧ ರಫೆಲ್ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಅವರ ನಿಧನದ ನಂತರ ಹೂಳಲಾದ ಅಸ್ತಿ ಪಂಜರ ತೆಗೆದು ಅದರ ಆಧಾರದ ಮೇಲೆ ತ್ರಿ ಡಿ ಚಿತ್ರ ರಚಿಸಲಾಗಿದೆ.
ಸಮಾಧಿಯಿಂದ ಹೊರ ತೆಗೆದಿದ್ದು ರಫೆಲ್ ಅವರ ದೇಹದ ಭಾಗಗಳೇ ಹೌದು ಎಂಬುದನ್ನು ಖಚಿತ ಮಾಡುವ ನಿಟ್ಟಿನಲ್ಲಿ ರೋಮ್ ನ ಟೆರ್ ವೆರ್ಘಾತಾ ವಿಶ್ವ ವಿದ್ಯಾಲಯದ ತಜ್ಞರು ಅಧ್ಯಯನ ಪ್ರಾರಂಭಿಸಿದ್ದಾರೆ. ಏಕೆಂದರೆ ಸ್ಮಶಾನದಲ್ಲಿ ರಫೆಲ್ ಅವರ ಅಕ್ಕಪಕ್ಕ ಇನ್ನೂ ಹಲವು ದೇಹಗಳು ಇರುವುದರಿಂದ ಈ ಬಗ್ಗೆ ಅಧ್ಯಯನ ಮಾಡಬೇಕಿದೆ.
ಅಸ್ತಿ ಪಂಜರದ ಮೂಲಕ ವ್ಯಕ್ತಿಯ ಮುಖ ವರ್ಣಿಕೆಯನ್ನು ಸಿದ್ಧ ಮಾಡುವ ಮಾರ್ಪಾಲಜಿ ತಂತ್ರಜ್ಞಾನ ಇತ್ತೀಚೆಗೆ ಅಭಿವೃದ್ಧಿಯಾಗಿದ್ದು, ಅಧ್ಯಯನಕ್ಕೆ ಬಳಸಲಾಗುತ್ತಿದೆ.