ಕೊರೋನಾ ರೋಗಿಗಳ ಮರಣವನ್ನು ತಡೆಯುವಲ್ಲಿ ರೆಮ್ ಡಿಸಿವರ್ ಪರಿಣಾಮಕಾರಿಯಾಗಿಲ್ಲ ಎನ್ನುವ ಮಾಹಿತಿ ಅಧ್ಯಯನದಲ್ಲಿ ಗೊತ್ತಾಗಿದೆ. ಕೊರೋನಾ ಸೋಂಕು ತಗಲಿ ಆಸ್ಪತ್ರೆಗೆ ದಾಖಲಾದ ರೋಗಿಗಳಲ್ಲಿ ಮರಣ ಅಥವಾ ಆಸ್ಪತ್ರೆಯಲ್ಲಿ ಉಳಿಯುವ ದಿನಗಳ ಅವಧಿಯನ್ನು ಕಡಿಮೆ ಮಾಡುವ ಯಾವುದೇ ಪರಿಣಾಮ ಬೀರಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.
ವಿಶ್ವ ಆರೋಗ್ಯ ಸಂಸ್ಥೆಯಿಂದ ನಡೆಸಿದ ಪ್ರಾಯೋಗಿಕ ಪರೀಕ್ಷೆಯಲ್ಲಿ ಗಿಲಾಡ್ ಸೈನ್ಸ್ ನ ರೆಮ್ ಡಿಸಿವರ್ ಔಷಧ ಬಳಕೆ ಪರಿಣಾಮಗಳ ಬಗ್ಗೆ ಗೊತ್ತಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊರೋನಾ ಸೋಂಕಿಗೆ ತುತ್ತಾಗಿದ್ದ ಸಂದರ್ಭದಲ್ಲಿ ಅವರ ಚಿಕಿತ್ಸೆಗೆ ಬಳಸಿದ ಮೊದಲ ಆಂಟಿವೈರಸ್ ಔಷಧಗಳಲ್ಲಿ ಇದು ಕೂಡ ಒಂದಾಗಿದೆ.
30ತ್ತಕ್ಕೂ ಹೆಚ್ಚು ದೇಶಗಳಲ್ಲಿ 11,266 ವಯಸ್ಕ ರೋಗಿಗಳಲ್ಲಿ ರೆಮೆಡೆಸಿವಿರ್, ಹೈಡ್ರಾಕ್ಸಿಕ್ಲೋರೋಕ್ವಿನ್, ಹೆಚ್ಐವಿ ವಿರೋಧಿ ಔಷಧ ಸಂಯೋಜನೆ, ಲೋಪಿನಾವಿರ್ /ರಿಟೊನವಿರ್ ಮತ್ತು ಇಂಟರ್ಫೆರಾನ್ ಸೇರಿದಂತೆ ನಾಲ್ಕು ಸಂಭಾವ್ಯ ಪರಿಣಾಮಗಳನ್ನು ಮೌಲ್ಯಮಾಪನ ಮಾಡಿದ ವಿಶ್ವ ಆರೋಗ್ಯ ಸಂಸ್ಥೆ ಅಧ್ಯಯನದಲ್ಲಿ ಈ ಮಾಹಿತಿ ಗೊತ್ತಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ ಅವರು ಅಧ್ಯಯನದ ಸಮಯದಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಲೋಪಿನಾವಿರ್ ಪರಿಣಾಮಕಾರಿಯಾಗಿಲ್ಲ ಎಂದು ಸಾಬೀತುಪಡಿಸಿದ ನಂತರದಲ್ಲಿ ನಿಲ್ಲಿಸಲಾಗಿದೆ. ಆದರೆ, ಇತರ ಪ್ರಯೋಗಗಳು 500ಕ್ಕೂ ಹೆಚ್ಚು ಆಸ್ಪತ್ರೆಗಳು ಮತ್ತು 30 ದೇಶಗಳಲ್ಲಿ ಮುಂದುವರೆದಿದೆ ಎಂದು ಮಾಹಿತಿ ನೀಡಲಾಗಿದೆ. ಮುಂದಿನ ಫಲಿತಾಂಶಗಳನ್ನು ಎದುರು ನೋಡಲಾಗುತ್ತಿದೆ. ಪರಿಣಾಮಕಾರಿ ಔಷಧಗಳ ಬಳಕೆ ಕುರಿತಾಗಿ ಅಧ್ಯಯನ ನಡೆಸಲಾಗಿದೆ ಎಂದು ಹೇಳಿದ್ದಾರೆ.