ಟೈರನ್ನೋಸಾರಸ್ ರೆಕ್ಸ್ನ ಹಳೆಯ ಸಂಬಂಧಿ ಎಂದು ಕರೆಯಲ್ಪಡುವ 230 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಡೈನಾಸಾರ್ನ ಅವಶೇಷಗಳು ಬ್ರೆಜಿಲ್ನಲ್ಲಿ ಪತ್ತೆಯಾಗಿದೆ.
ಈ ಡೈನೋಸಾರ್ಗಳನ್ನ ಎರಿಥ್ರೋವೆನೇಟರ್ ಎಂದು ಗುರುತಿಸಲಾಗಿದೆ. ಇದನ್ನ ಟಿ ರೆಕ್ಸ್ನ ಗಾಡ್ಫಾದರ್ ಎಂದು ಕರೆಯಲಾಗುತ್ತದೆ. ಏಕೆಂದರೆ ಇದು ಮಾಂಸಾಹಾರಿ ಡೈನೋಸಾರ್ಗಳಾದ ಟೈರನ್ನೋಸಾರಸ್ ಹಾಗೂ ವೆಲೋಸಿರಾಪ್ಟರ್ ವಂಶಾವಳಿಯಿಂದ ಬಂದಿದ್ದಾಗಿದೆ. ಜುರಾಸಿಕ್ ಪಾರ್ಕ್ ಫಿಲಂ ಈ ಡೈನೋಸಾರ್ಗಳಿಗೆ ಇನ್ನಷ್ಟು ಜನಪ್ರಿಯತೆ ಸಿಗುವಂತೆ ಮಾಡಿತು.
ತಜ್ಞರು ಹೇಳುವ ಪ್ರಕಾರ ಎರಿಥ್ರೋವೆನೇಟರ್ ತೀಕ್ಷ್ಣವಾದ ಹಲ್ಲುಗಳು ಹಾಗೂ ಉಗುರುಗಳನ್ನ ಹೊಂದಿದೆ. ಅತ್ಯಂತ ಪ್ರಾಚೀನ ಪ್ರಾಣಿಯಾದ ಎರಿಥ್ರೀವೆನೇಟರ್ ಬರೋಬ್ಬರಿ ಆರು ಅಡಿ ಉದ್ದವಿತ್ತು ಎನ್ನಲಾಗಿದೆ.