ವಿಶ್ವದಲ್ಲಿ ಹಲವಾರು ದೇವಸ್ಥಾನಗಳು ತನ್ನದೇ ವಿಶೇಷತೆಯನ್ನು ಹೊಂದಿವೆ. ದೇವಸ್ಥಾನದ ನಿರ್ಮಾಣ ಅಥವಾ ಅಲ್ಲಿನ ಪದ್ಧತಿಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಥೈಲ್ಯಾಂಡ್ ನಲ್ಲಿರುವ ದೇವಸ್ಥಾನವೊಂದು ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ನ್ಯೂ ಶಾಹು ʼಪ್ಯಾಲೇಸ್ʼ ನೋಡಿದ್ದೀರಾ…..?
ಈ ದೇವಸ್ಥಾನದ ಹೆಸ್ರು Wat Pa Maha Chedi Kaew. 1984ರಲ್ಲಿ ಈ ದೇವಸ್ಥಾನ ನಿರ್ಮಾಣಗೊಂಡಿದೆ. ಈ ದೇವಸ್ಥಾನವನ್ನು ಬಿಯರ್ ಬಾಟಲಿಯಿಂದ ನಿರ್ಮಾಣ ಮಾಡಲಾಗಿದೆ. ಸುಮಾರು 15 ಲಕ್ಷ ಬಿಯರ್ ಬಾಟಲಿಯಿಂದ ದೇವಸ್ಥಾನ ನಿರ್ಮಾಣಗೊಂಡಿದೆ. ದೇವಸ್ಥಾನದ ಒಳಗೆ ಹಾಗೂ ಗೋಡೆಗಳಿಗೆ ಬಿಯರ್ ಬಾಟಲಿಯಿಂದಲೇ ಸುಂದರ ಕಲಾಕೃತಿ ಮಾಡಲಾಗಿದೆ. ವಾಷ್ ರೂಂ ಹಾಗೂ ಮೆಟ್ಟಿಲುಗಳನ್ನು ಕೂಡ ಬೇರೆ ಬೇರೆ ಬಣ್ಣದ ಬಿಯರ್ ಬಾಟಲಿಯಿಂದ ಕಟ್ಟಲಾಗಿದೆ.
ಪ್ರವಾಸಿಗಳು ಬಿಯರ್ ಬಾಟಲಿಯಲ್ಲಿ ನಿರ್ಮಾಣವಾದ ದೇವಸ್ಥಾನವನ್ನು ನೋಡಿ ಚಕಿತಗೊಳ್ತಾರೆ. ಪವಿತ್ರ ದೇವಸ್ಥಾನವನ್ನು ಬಿಯರ್ ಬಾಟಲಿಯಲ್ಲಿ ನಿರ್ಮಾಣ ಮಾಡಲು ಒಂದು ಮುಖ್ಯ ಕಾರಣವಿದೆ. 1984ರ ಸಮಯದಲ್ಲಿ ದೇವಸ್ಥಾನದಲ್ಲಿ ಸನ್ಯಾಸಿಗಳು ಸಮುದ್ರದಿಂದ ಬರ್ತಿದ್ದ ಕಸಕ್ಕೆ ಬೇಸತ್ತಿದ್ದರು. ಕಸದಿಂದ ಮುಕ್ತಿ ನೀಡುವಂತೆ ಸ್ಥಳೀಯರಲ್ಲಿ ವಿನಂತಿ ಮಾಡಿದ್ದರು. ಆ ನಂತ್ರ ಎಲ್ಲರೂ ಒಮ್ಮತನ ನಿರ್ಧಾರಕ್ಕೆ ಬಂದು ದೇವಸ್ಥಾನವನ್ನು, ಬಳಸಿ ಎಸೆದಿದ್ದ ಬಿಯರ್ ಬಾಟಲಿಯಿಂದ ನಿರ್ಮಾಣ ಮಾಡಿದ್ರು.