ಪರಸ್ಪರ ವೈರುಧ್ಯದ ಸ್ವಾದಗಳನ್ನು ಹೊಂದಿರುವ ಎರಡು ತಿನಿಸುಗಳನ್ನು ಸೇರಿಸಿ ಕಾಂಬೋ ಮಾಡಿದರೆ ಸಿಗುವ ಅಂತಿಮ ಪ್ರಾಡಕ್ಟ್ ಬಗ್ಗೆ ಸಹಜವಾಗಿಯೇ ಎಲ್ಲರೂ ಮೂಗು ಮುರಿಯುತ್ತಾರೆ.
ಇತ್ತೀಚಿನ ದಿನಗಳಲ್ಲಿ ಇಂಥ ವಿಚಿತ್ರ ಫ್ಯೂಶನ್‌ಗಳು ತೀರಾ ಹೆಚ್ಚಾಗಿಬಿಟ್ಟಿವೆ. ಮ್ಯಾಗಿ & ಚಾಕಲೇಟ್‌ನ ಹೊಸ ಫ್ಯೂಶನ್ ಒಂದನ್ನು ರಾಹುಲ್ ಪಾಸ್ಸಿ ಎಂಬಾತ ನೆಟ್ಟಿಗರಿಗೆ ಪರಿಚಯಿಸಿದ್ದ. ಸಹಜವಾಗಿಯೇ ನೆಟ್ಟಿಗರು ಇದನ್ನು ಕಂಡು, “ಛೇ! ಇದೆಂತ ಪ್ರಯೋಗ?” ಎಂದು ಹೌಹಾರಿದ್ದರು.
ಇದೇ ಜನವರಿಯಲ್ಲಿ ಕಿವಿ ಹಣ್ಣನ್ನು ಬಳಸಿ ಪಿಜ್ಝಾ ಟಾಪಿಂಗ್ ಮಾಡಿದ್ದ ಸ್ವೀಡನ್‌ನ ಸ್ಟೆಲ್ಲಾನ್ನ ಜೊಹಾನ್ಸನ್ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಬಲೇ ಸದ್ದು ಮಾಡಿದ್ದ. 2019ರ ಕ್ರಿಸ್‌ಮಸ್ ವೇಳೆ ತನಗೆ ಸಿಕ್ಕಿದ್ದ 10 ಕೆಜಿ ಕಿವಿ ಹಣ್ಣನ್ನು ಬಳಸಿಕೊಂಡು ಪಿಜ್ಝಾ ಮಾಡಲು ಹೊರಟಿದ್ದ ಸ್ಟೆಲ್ಲನ್. ಇದನ್ನು ಕಂಡ ನೆಟ್ಟಿಗರು ಪರ ಪರ ತಲೆ ಕೆರೆದುಕೊಂಡುಬಿಟ್ಟಿದ್ದರು. ಈ ಕಿವಿ ಪಿಜ್ಝಾದ ಚಿತ್ರಗಳು ವೈರಲ್ ಆಗಿದ್ದು, ನೆಟ್ಟಿಗ ಸಮೂಹ, ’ಇದೆಂಥಾ ಸ್ಟುಪಿಡ್ ಪ್ರಯೋಗ’ ಎಂದೆಲ್ಲಾ ನೆಗೆಟಿವ್ ಪ್ರತಿಕ್ರಿಯೆಗಳನ್ನು ಕೊಟ್ಟ ಬಳಿಕ ಸ್ಟೆಲ್ಲಾನ ಪತ್ನಿ ಆತನಿಗೆ ವಿಚ್ಛೇದನ ಕೊಟ್ಟುಬಿಟ್ಟಿದ್ದಾಳೆ…!