ಪೆಂಗ್ವಿನ್‌ಗಳು ಎಂದರೆ ಸಾಮಾನ್ಯವಾಗಿ ಅವೆಲ್ಲಾ ಕಪ್ಪು & ಬಿಳಿಯ ಬಣ್ಣ ಇರುತ್ತವೆ ಎಂಬುದು ನಮ್ಮೆಲ್ಲರಿಗೋ ಒಂದು ಅಂದಾಜು ಇರುತ್ತದೆ. ಆದರೆ ಹಳದಿ ಬಣ್ಣದ ಪೆಂಗ್ವಿನ್ ಬಗ್ಗೆ ಎಲ್ಲಾದರೂ ಕೇಳಿದ್ದೀರಾ?
ದಕ್ಷಿಣ ಅಟ್ಲಾಂಟಿಕ್ ಪ್ರದೇಶದ ಜಾರ್ಜಿಯಾದ ದಕ್ಷಿಣ ಪ್ರದೇಶದಲ್ಲಿ ಸುತ್ತಾಡುತ್ತಿದ್ದ ಬೆಲ್ಜಿಯನ್ ವನ್ಯಜೀವಿ ಛಾಯಾಗ್ರಾಹಕರೊಬ್ಬರು ಈ ಅಪರೂಪದ ಚಿತ್ರವನ್ನು ಸೆರೆ ಹಿಡಿದಿದ್ದಾರೆ. 1,20,000 ದಷ್ಟು ಪೆಂಗ್ವಿನ್‌ಗಳಿರುವ ಈ ಜಾಗದ ಡಾಕ್ಯೂಮೆಂಟಿಂಗ್ ಮಾಡುತ್ತಿದ್ದ ವೇಳೆ ಆಡಮ್ಸ್ ಕಣ್ಣಿಗೆ ಈ ದೃಶ್ಯ ಕಣ್ಣಿಗೆ ಬಿದ್ದಿದೆ.
ಡ್ರಗ್ಸ್ ಕೇಸ್‌ನಲ್ಲಿ ಸಿಕ್ಕಿ ಬಿದ್ದ ಬಿಜೆಪಿ ಯುವ ಮೋರ್ಚಾ ನಾಯಕಿ
“ಪೆಂಗ್ವಿನ್ ನಮ್ಮಿಂದ ಇನ್ನು ಕೇವಲ 50 ಮೀಟರ್ ಹೆಚ್ಚು ದೂರದಲ್ಲಿ ಇದ್ದಿದ್ದರೆ ನಮ್ಮ ಕಣ್ಣಿನಲ್ಲಿ ಜೀವಮಾನದ ಈ ದೃಶ್ಯಾವಳಿಯನ್ನು ನೋಡಲು ಆಗುತ್ತಿರಲಿಲ್ಲ” ಎಂದು ಆಡಮ್ಸ್ ತಿಳಿಸಿದ್ದಾರೆ. ಈ ಬಣ್ಣದ ಪೆಂಗ್ವಿನ್ ಅನ್ನು ಇದುವರೆಗೂ ಕಂಡೇ ಇಲ್ಲ ಎಂದಿದ್ದಾರೆ ಈ ಛಾಯಾಗ್ರಾಹಕ.
https://www.instagram.com/p/CLbVN4FAT2u/?utm_source=ig_web_copy_link