ನ್ಯೂಯಾರ್ಕ್: ಉದ್ದವಾದ ಹಲ್ಲುಗಳುಳ್ಳ ವಿಶೇಷ ಪ್ರಜಾತಿಯ ಹುಲಿಯ ಸಂರಕ್ಷಿತ ಅಸ್ಥಿಪಂಜರವೊಂದನ್ನು ಹರಾಜಿಗೆ ಇಡಲಾಗಿದೆ.
ದಕ್ಷಿಣ ಅಮೆರಿಕಾದಲ್ಲಿ 37 ಲಕ್ಷ ವರ್ಷದ ಹಿಂದೆ ಇದ್ದ ಉದ್ದದ ಹಲ್ಲುಗಳ ಹುಲಿಯೊಂದರ ಪಳೆಯುಳಿಕೆ ಇದಾಗಿದ್ದು, 160 ಕೆಜಿ ತೂಕವಿದೆ. ಡಿ. 1 ರಂದು ಇದನ್ನು ಹರಾಜಿಗೆ ಇಡಲಾಗಿದ್ದು, ಮುಂದಿನ ವಾರ ಹರಾಜು ಪ್ರಕ್ರಿಯೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ.
ದಕ್ಷಿಣ ಡಕೋಟಾದಲ್ಲಿ ಈ ಪಳೆಯುಳಿಕೆ ಸಿಕ್ಕಿದ್ದು ಕಲ್ಲಿನಂತೆ ಗಟ್ಟಿಯಾಗಿದೆ. 65 ಸಾವಿರ ಡಾಲರ್ ನಿಂದ 90 ಸಾವಿರ ಡಾಲರ್ ವರೆಗೆ ಮಾರಾಟವಾಗಬಹುದು ಎಂದು ಹರಾಜು ಸಂಸ್ಥೆ ಪಿಗೆಟ್ ಹೇಳಿದೆ.