ಮನೆಯೊಂದರ ನೆಲದ ಕೆಳಗೆ ಬಚ್ಚಿಡಲಾಗಿದ್ದ 23.7 ಕೋಟಿ ರೂ. ಮೌಲ್ಯದ 200 ಪುಸ್ತಕಗಳನ್ನು ರೊಮಾನಿಯಾದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇವುಗಳ ಪೈಕಿ ಗೆಲಿಲಿಯೋ ಹಾಗೂ ಐಸಾಕ್ ನ್ಯೂಟನ್‌ರ ಅಧ್ಯಯನ ವರದಿಗಳಿರುವ ಮೊದಲ ಅವತರಣಿಕೆಯ ಪುಸ್ತಕಗಳೂ ಸಹ ಸೇರಿವೆ.
ಲಂಡನ್ ನಲ್ಲಿರುವ ಸಂಗ್ರಹಾಗಾರದಿಂದ 200+ ಪುಸ್ತಕಗಳು ಕಳೆದು ಹೋಗಿದ್ದವು. ಸಂಗ್ರಹಾಗಾರದಲ್ಲಿರುವ ಮೋಷನ್ ಡಿಟೆಕ್ಟರ್‌ಗಳನ್ನು ಬೇಧಿಸಲೆಂದು ಕಳ್ಳರು ಕಟ್ಟಡದ ಮೇಲ್ಛಾವಣಿಯನ್ನು ಕೊರೆದು ಬಂದು, 16 ದೊಡ್ಡ ಬ್ಯಾಗ್‌ಗಳಲ್ಲಿ ಈ ಪುಸ್ತಕಗಳನ್ನು ತುಂಬಿಕೊಂಡು, ಅದೇ ಮಾರ್ಗದಲ್ಲಿ ಹೊರಟುಬಿಟ್ಟಿದ್ದರು.
ರೊಮಾನಿಯಾದ ಗ್ರಾಮೀಣ ಪ್ರದೇಶದಲ್ಲಿರುವ ಮನೆಯೊಂದರ ನೆಲದ ಕೆಳಗೆ ಅಡಗು ಜಾಗವೊಂದರಲ್ಲಿ ಈ ಪುಸ್ತಕಗಳು ಸಿಕ್ಕಿವೆ. “ಈ ಪುಸ್ತಕಗಳು ಬೆಲೆ ಕಟ್ಟಲಾಗದ ಆಸ್ತಿಗಳಾಗಿದ್ದು, ಜಾಗತಿಕ ಮಟ್ಟದಲ್ಲಿ ಪಾರಂಪರಿಕ ಸ್ವತ್ತುಗಳಾಗವೆ,” ಎಂದು ಲಂಡನ್ ಮೆಟ್ರೋಪೊಲಿಟನ್ ಪೊಲೀಸರು ತಿಳಿಸಿದ್ದಾರೆ.