ಇಸ್ರೇಲಿನ ಟೆಲ್ ಅವೀವ್‌ನ ರಸ್ತೆಗಳಲ್ಲಿ ಹೋಗುತ್ತಿದ್ದವರಿಗೆ ಇದ್ದಕ್ಕಿದಂತೆ ಡ್ರೋನ್‌ನಿಂದ ಸುರಿದ ಪ್ಲಾಸ್ಟಿಕ್ ಪ್ಯಾಕೆಟ್ ಅಚ್ಚರಿ ಮೂಡಿಸಿತು. ಈ ಪ್ಯಾಕೆಟ್‌ನಲ್ಲಿರುವುದೇನು ಎಂದು ನೋಡಿದ ಅನೇಕರು ಹೌಹಾರಿದರು. ಏಕೆಂದರೆ ಆ ಪ್ಯಾಕೆಟ್ ನಲ್ಲಿ ಇದ್ದಿದ್ದು ಗಾಂಜಾ
ಹೌದು, ಅಚ್ಚರಿಯಾದರೂ ಸತ್ಯ. ಇಸ್ರೇಲ್‌ನಲ್ಲಿ ಡ್ರೋನ್ ಒಂದರಲ್ಲಿ ಒಂದು ಕೆಜಿ ತೂಕದ ಗಾಂಜಾವನ್ನು ಎರಡು ಗ್ರಾಂ ಆಗಿ ವಿಂಗಡಿಸಿ ಆಕಾಶದಿಂದ ಬಿಡಲಾಗಿದೆ. ಇದನ್ನು ಕಂಡ ಅನೇಕರು ಓಡಿ ಹೋಗಿ ತಮ್ಮ ಪಾಲನ್ನು ಪಡೆಯಲು ಗುದ್ದಾಡಿರುವ ಘಟನೆ ನಡೆದಿದೆ.
ಇಸ್ರೇಲ್‌ನಲ್ಲಿ ಗಾಂಜಾ ಮಾರಾಟಕ್ಕೆ ನಿಷೇಧಕ್ಕೆವಿದ್ದರೂ, ಕೊರೋನಾ ಲಾಕ್‌ಡೌನ್ ಸಮಯದಲ್ಲಿ ಔಟ್ ಆಫ್ ದಿ ಬಾಕ್ಸ್ ಯೋಚನೆ ಮಾಡಬೇಕು ಎನ್ನುವ ಕಾರಣಕ್ಕೆ 30 ವರ್ಷದ ಇಬ್ಬರು ಯುವಕರು ಈ ರೀತಿ ಮಾಡಿದ್ದಾರೆ. ಇದಕ್ಕೂ ಮೊದಲು ಒಮ್ಮೆ ಇದೇ ರೀತಿ ಗಾಂಜಾ ಮಳೆಗರೆದಿದ್ದ ಯುವಕರು ಇದೀಗ ಇನ್ನೊಮ್ಮೆ ಮಾಡಿದ್ದಾರೆ. ಇದೀಗ ಯುವಕರನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ ಎಂದು ಹೇಳಲಾಗಿದೆ. ಆದರೆ ಗಾಂಜಾ ಮಳೆಯ ವಿಡಿಯೊ ಮಾತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.