ಐದು ವರ್ಷ ಬಾಲಕನೊಬ್ಬನ ಸಮಯ ಪ್ರಜ್ಞೆಯಿಂದ ಕುಸಿದು ಬಿದ್ದಿದ್ದ ಆತನ ತಾಯಿ ಪ್ರಾಣಾಪಾಯದಿಂದ ಪಾರಾದ ಘಟನೆ ಬ್ರಿಟನ್‌ನ ಶ್ರಾಪ್‌ಶೈರ್‌ನ ಟೆಲ್‌ಫೋರ್ಡ್‌ನಲ್ಲಿ ಘಟಿಸಿದೆ.
ಜೋಶ್ ಚಾಪ್‌ಮನ್ ಹೆಸರಿನ ಈ ಬಾಲಕ ತನ್ನ ಪುಟ್ಟ ತಮ್ಮನೊಂದಿಗೆ ಆಟವಾಡುತ್ತಿದ್ದ ವೇಳೆ ಆತನ ತಾಯಿ ಕರೋಲಿನ್ ಕುಸಿದು ಬಿದ್ದಿದ್ದಾರೆ. ಆ ಮುನ್ನ ಒಂದೇ ಒಂದು ಬಾರಿಯೂ ಫೋನ್ ಬಳಸದೇ ಇದ್ದ ಜೋಶ್, ತನ್ನ ಆಟದ ಸಾಮಾನಿನ ಆಂಬುಲೆನ್ಸ್ ಮೂಲಕ ತುರ್ತು ಸಂಪರ್ಕ ಸಂಖ್ಯೆ 112ಕ್ಕೆ ಕರೆ ಮಾಡಿದ್ದಾನೆ. ಅಲ್ಲಿಂದ ಪೊಲೀಸ್ ಆಪರೇಟರ್‌ಗೆ ಸಂಪರ್ಕ ಸಿಕ್ಕಿದೆ.
ಪೊಲೀಸ್ ಅಧಿಕಾರಿಗಳು ಜೋಶ್‌ನ ಲೊಕೇಷನ್ ಪತ್ತೆ ಮಾಡಿ, ತುರ್ತು ಸೇವೆಗಳನ್ನು ತಮ್ಮೊಂದಿಗೆ ಕರೆತಂದು, ಪ್ಯಾರಾಮೆಡಿಕ್ಸ್ ನೆರವಿನಿಂದ ಕರೋಲಿನ್‌ರನ್ನು ರಕ್ಷಿಸಿದ್ದಾರೆ. ತನ್ನ ಮಕ್ಕಳ ಜೊತೆಗೆ ಆಟವಾಡುತ್ತಿದ್ದ ವೇಳೆ ಕರೋಲಿನ್ನ್ ಡಯಾಬೆಟಿಕ್ ಕೋಮಾಗೆ ಹೋಗಿಬಿಟ್ಟಿದ್ದರು.
“ಸಾಮಾನ್ಯವಾಗಿ ನನ್ನ ದೇಹದಲ್ಲಿನ ಸಕ್ಕರೆ ಅಂಶವು ಕುಸಿಯುವುದು ನನ್ನ ಅರಿವಿಗೆ ಬರುತ್ತಿತ್ತು. ಆದರೆ ಈ ಬಾರಿ ಹಾಗೆ ಆಗಲಿಲ್ಲ. ನನಗಾಗಿ ಸಿಹಿಯನ್ನು ತರಲು ಜಾರ್‌ಗಳನ್ನು ಹುಡುಕಿದ ಜೋಶ್‌ಗೆ ಯಾವುದೂ ಸಿಗದೇ ಇದ್ದಾಗ, ಆಂಬುಲೆನ್ಸ್‌ಗೆ ಕರೆ ಮಾಡಿದ್ದಾನೆ. ಅವನಿಗೆ ಕಾರುಗಳು, ಅದರಲ್ಲೂ ಆಂಬುಲೆನ್ಸ್ ಅಂದ್ರೆ ಬಹಳ ಫೇವರಿಟ್. ಹಾಗಾಗಿ ಆತ ನೇರವಾಗಿ ತನ್ನ ಮೆಚ್ಚಿನ ಆಟದ ಸಾಮಾನನ್ನೇ ನೆರವಿಗೆ ಬಳಸಿಕೊಂಡಿದ್ದಾನೆ,” ಎಂದು ಕರೋಲಿನ್ ತಿಳಿಸಿದ್ದಾರೆ.
ಜೋಶ್‌ನ ಸಮಯ ಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಪೊಲೀಸರು ತಮ್ಮ ಠಾಣೆಗೆ ಬಂದು ಒಂದು ಟೂರ್ ಮಾಡಿಕೊಂಡು ಹೋಗಲು ಆತನಿಗೆ ಅವಕಾಶ ನೀಡಿದ್ದಾರೆ.
https://www.facebook.com/westmerciapolice/posts/10158471815188168