ಕೆನಡಾದಲ್ಲಿ 1600 ಕೆ.ಜಿ. ತೂಕದ ದೈತ್ಯ 17 ಅಡಿಯ ಶಾರ್ಕ್ ಪತ್ತೆಯಾಗಿದ್ದು, ಇದು ಗಾತ್ರ ಮತ್ತು ಭಾರದ ವಿಚಾರದಲ್ಲಿ ಸಾಗರದ ರಾಣಿಯೇ ಇರಬೇಕು.
ಅಕ್ಟೋಬರ್ 2 ರಂದು ಪೂರ್ವ ಕೆನಡಾದ ನೋವಾ ಸ್ಕಾಟಿಯಾದ ಕರಾವಳಿಯಲ್ಲಿ ಈ ಬೃಹತ್ ಶಾರ್ಕ್ ಪತ್ತೆಯಾಗಿದೆ.
ಸಂಶೋಧಕರ ಗುಂಪು ಓಸಿಯಾರ್ಚ್, ಇದನ್ನು ವಾಯುವ್ಯ ಅಟ್ಲಾಂಟಿಕ್ನಲ್ಲಿ ನಾಲ್ಕು ವಾರಗಳ ಕಾರ್ಯಾಚರಣೆಯಲ್ಲಿ ಕಂಡು ಹಿಡಿದಿದೆ, ಮುಂದೆ ಇದರ ಆಧಾರದಲ್ಲಿ ಅಧ್ಯಯನ ಮಾಡಲು ಬಯಸಿದ್ದಾರೆ. ಸಮುದ್ರದಲ್ಲಿ ಅವುಗಳ ಚಲನವಲನಗಳನ್ನು ಪತ್ತೆಹಚ್ಚಲು ಟ್ಯಾಗ್ ಮಾಡಲಾಗಿದೆ.
ಕ್ರಿಸ್ ಫಿಷರ್ ನೇತೃತ್ವದ ಓಷಾರ್ಚ್ ತಂಡವು ದೈತ್ಯ ಶಾರ್ಕ್ ಅನ್ನು ‘ನುಕುಮಿ’ ಎಂದು ಹೆಸರಿಸಿದೆ. ನುಕುಮಿ ಇದುವರೆಗೆ ಹಿಡಿದ ಅತಿದೊಡ್ಡ ಶಾರ್ಕ್ ಎಂದು ಹೇಳಿದೆ.
ಈ ಮಹಾನ್ ಶಾರ್ಕ್ ಅನ್ನು ಪರಿಚಯಿಸಲು ತಂಡವು ಫೇಸ್ಬುಕ್ ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದೆ.