alex Certify ಪತಿಯ ಅಂತ್ಯಕ್ರಿಯೆ ಕಾರ್ಯ ಪೂರೈಸಿ ಕರ್ತವ್ಯಕ್ಕೆ ವಾಪಸ್ಸಾದ ಕ್ವೀನ್​ ಎಲಿಜಬೆತ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತಿಯ ಅಂತ್ಯಕ್ರಿಯೆ ಕಾರ್ಯ ಪೂರೈಸಿ ಕರ್ತವ್ಯಕ್ಕೆ ವಾಪಸ್ಸಾದ ಕ್ವೀನ್​ ಎಲಿಜಬೆತ್​

ಬ್ರಿಟನ್​​ ರಾಣಿ ಎಲೆಜಬೆತ್​​ ತಮ್ಮ ಪತಿಯ ಅಂತ್ಯಕ್ರಿಯೆ ಎಲ್ಲಾ ಪ್ರಕ್ರಿಯೆಗಳನ್ನ ಪೂರೈಸಿ ನಾಲ್ಕು ದಿನಗಳ ಬಳಿಕ ಇದೀಗ ರಾಜವಂಶದ ಕರ್ತವ್ಯಕ್ಕೆ ವಾಪಸ್​ ಆಗಿದ್ದಾರೆ.

99 ವರ್ಷದ ಪ್ರಿನ್ಸ್ ಫಿಲಿಪ್​​​ ವಯೋಸಹಜ ಕಾಯಿಲೆಯಿಂದ ಶುಕ್ರವಾರ ನಿಧನರಾಗಿದ್ದರು. ಈ ರಾಜವಂಶಸ್ಥ ದಂಪತಿ ಬರೋಬ್ಬರಿ 69 ವರ್ಷದ ದಾಂಪತ್ಯ ಜೀವನ ನಡೆಸಿದ್ದರು. ಶನಿವಾರ ಪ್ರಿನ್ಸ್ ಫಿಲಿಪ್​ರ ಅಂತ್ಯಕ್ರಿಯೆಯನ್ನ ನಡೆಸಲಾಗಿತ್ತು.

ಪ್ರಿನ್ಸ್​ ಫಿಲಿಪ್​ 1947ರಲ್ಲಿ ರಾಣಿ ಎಲಿಜಬೆತ್​ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇತ್ತೀಚಿನ ವರ್ಷಗಳಲ್ಲಿ ರಾಣಿ ಎಲೆಜೆಬೆತ್​​ ರಾಜವಂಶಸ್ಥ ಕರ್ತವ್ಯಗಳಿಂದ ದೂರವೇ ಇದ್ದರು. ತಮ್ಮ ಮಗ ವಿಲಿಯಂ ಹಾಗೂ ಅನೇಕ ಹಿರಿಯ ರಾಜವಂಶಸ್ಥರಿಗೆ ಕರ್ತವ್ಯಗಳನ್ನ ಹಂಚಿದ್ದರು. ರಾಣಿ ಈಗಲೂ ಪಾರ್ಲಿಮೆಂಟ್​ ಪ್ರಾರಂಭ ಮಾಡುವಂತಹ ಸಾಂಕೇತಿಕ ಕರ್ತವ್ಯಗಳನ್ನ ಮಾತ್ರ ನಿರ್ವಹಿಸುತ್ತಿದ್ದಾರೆ.

ಫಿಲಿಪ್​ರ ಮರಣದಿಂದ ಕುಟುಂಬಕ್ಕೆ ತುಂಬಲಾರದ ನಷ್ಟ ಉಂಟಾಗಿದ್ದರೂ ಸಹ ಇದರಿಂದ ರಾಜವಂಶಸ್ಥ ಕುಟುಂಬದ ಕರ್ತವ್ಯಗಳಿಗೆ ಧಕ್ಕೆ ಆಗೋದಿಲ್ಲ ಎಂದು ಹೇಳಿದೆ. ಫಿಲಿಪ್​ ವಿಶ್ವದ ಅತ್ಯಂತ ಹಿರಿಯ ಜೀವಂತವಿರುವ ರಾಜ ಎಂಬ ಕೀರ್ತಿಗೆ ಪಾತ್ರರಾಗಿದ್ದರು, ತಮ್ಮ ಪುತ್ರ ಹಾಗೂ ಉತ್ತರಾಧಿಕಾರಿ ಪ್ರಿನ್ಸ್​ ಚಾರ್ಲ್ಸ್​ಗಾಗಿ ಅವರು ಸಿಂಹಾಸನವನ್ನ ತ್ಯಜಿಸಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...