ಕೊರೋನಾ ವೈರಸ್ ಜಗತ್ತಿನಾದ್ಯಂತ ಪಸರಿಸಿದ ಬಳಿಕ ಇದೇ ಮೊದಲ ಬಾರಿಗೆ ಬ್ರಿಟನ್ ರಾಣಿ ಎಲಿಜಬೆತ್ II ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
ವೆಸ್ಟ್‌ಮಿನ್‌ಸ್ಟರ್ ಅಬ್ಬೆ ಬಳಿ ಇರುವ ಶತಮಾನದ ಹಿಂದೆ ಅಗಲಿದ ಯೋಧರೊಬ್ಬರ ಸಮಾಧಿಯ ಬಳಿ ಮಾಸ್ಕ್ ಧರಿಸಿ ಕಾಣಿಸಿಕೊಂಡಿರುವ ರಾಣಿ, ಕಳೆದ ಮಾರ್ಚ್‌ನಿಂದ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ದರ್ಶನ ನೀಡಿದ್ದಾರೆ.
ಈ ವೇಳೆ ಕಪ್ಪು ಬಣ್ಣದ ಬಟ್ಟೆ ಧರಿಸಿದ್ದ ರಾಣಿ ಅದೇ ಬಣ್ಣದ ಮಾಸ್ಕ್ ಸಹ ಧರಿಸಿದ್ದರು. ಅವರ ವೈಯಕ್ತಿಕ ಸಲಹೆಗಾರ್ತಿ ಅಂಜೆಲಾ ಕೆಲ್ಲಿ ಈ ಧಿರಿಸನ್ನು ಡಿಸೈನ್ ಮಾಡಿದ್ದಾರೆ ಎನ್ನಲಾಗಿದೆ.
1947ರಲ್ಲಿ ವೆಸ್ಟ್‌ಮಿನ್‌ಸ್ಟರ್‌ನಲ್ಲಿ ಮದುವೆಯಾದ ರಾಣಿಗೆ ಈ ಜಾಗ ಅವರ ಜೀವನದ ಅವಿಭಾಜ್ಯ ಅಂಗವೇ ಆಗಿಬಿಟ್ಟಿದೆ.