ಸಾರ್ವಜನಿಕ ಶೌಚಾಲಯಗಳ ಗೋಡೆಗಳು ಪಾರದರ್ಶಕವಾಗಿಬಿಟ್ಟರೆ ಹೇಗಿರಬಹುದು ಎಂದು ಎಂದಾದರೂ ಊಹೆ ಮಾಡಿದ್ದೀರಾ…? ಇದೆಂಥಾ ಪ್ರಶ್ನೆಯಪ್ಪಾ ಎಂದುಕೊಂಡಿರಾ?
ಟೋಕಿಯೋದ ಶಿಬುಯಾ ಪ್ರದೇಶದಲ್ಲಿ ಇದೇ ರೀತಿ ಪಾರದರ್ಶಕ ಗೋಡೆಗಳಿರುವ ಸಾರ್ವಜನಿಕ ಶೌಚಾಲಯಗಳು ಜನರ ಗಮನ ಸೆಳೆಯುತ್ತಿವೆ. ಇಲ್ಲಿನ ಎರಡು ಉದ್ಯಾನಗಳಲ್ಲಿ ಹೀಗೆ ಸೀ ಥ್ರೂ ವಾಶ್ರೂಂಗಳನ್ನು ಅಳವಡಿಸಲಾಗಿದೆ.
ಇದೆಂಥ ಪ್ರಾರಬ್ಧ ಎಂದುಕೊಂಡಿರಾ…? ಅಲ್ಲೇ ಇರೋದು ನೋಡಿ ಸ್ವಾರಸ್ಯ…! ಶಿಗೇರು ಬಾನ್ ಆರ್ಕಿಟೆಕ್ಟ್ಸ್ ಅಭಿವೃದ್ಧಿಪಡಿಸಿರುವ ಈ ಶೌಚಾಲಯಗಳ ಒಳಗೆ ನೀವು ಪ್ರವೇಶಿಸಿ ಬಾಗಿಲು ಹಾಕಿಕೊಳ್ಳುತ್ತಲೇ ಅದರ ಗೋಡೆಗಳು ಪಾರದರ್ಶಕವಾಗಿ ಉಳಿಯುವುದಿಲ್ಲ! ಹಾಗಾಗಿ, ಏನೂ ಚಿಂತೆ ಇಲ್ಲದೇ ಆರಾಮವಾಗಿ ನಿತ್ಯಕರ್ಮವನ್ನು ಮುಗಿಸಿ ಹೊರಬರಲು ಅಡ್ಡಿಯಿಲ್ಲ.