ಬ್ರಿಟನ್ ನ ಬಾರೊಂದರ ಆಡಳಿತ ವರ್ಗವು ಕುಡುಕರ ಕಾಟದಿಂದ ತಪ್ಪಿಸಿಕೊಳ್ಳಲು ಹೊಸದೊಂದು ಆವಿಷ್ಕಾರಿ ಐಡಿಯಾ ಮಾಡಿಕೊಂಡಿದೆ.
ಕೊರೊನಾ ವೈರಸ್ ಲಾಕ್ ಡೌನ್ ನಿರ್ಬಂಧದ ನಡುವೆ ಮದ್ಯ ಮಾರಾಟಕ್ಕೆ ಇದೀಗ ತಾನೇ ಸಡಿಲಿಕೆ ಕೊಡಲಾಗಿದೆ. ಇದೇ ವೇಳೆ ಅಲ್ಲಿನ ಬಾರ್ & ರೆಸ್ಟೋರೆಂಟ್ ಗಳು ತಮ್ಮ ಗ್ರಾಹಕರ ನಡುವೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಚಿಂತನೆ ನಡೆಸಿವೆ. ಆದರೆ ಅತಿ ಉತ್ಸಾಹದಲ್ಲಿರುವ ಕುಡುಕರನ್ನು ನಿಯಂತ್ರಿಸುವುದು ಎಷ್ಟು ಕಷ್ಟ ಎಂಬುದರ ಅರಿವು ಅವರಿಗಾಗುತ್ತಿದೆ.
ಕಾರ್ನ್‌ವಾಲ್‌ನ ಪಬ್ ಒಂದು, ತನ್ನ ಗ್ರಾಹಕರನ್ನು ನಿಯಂತ್ರಿಸಲೆಂದು ಪ್ಲಾಸ್ಟಿಕ್ ಸ್ಕ್ರೀನ್‌ಗಳು, ಸ್ಯಾನಿಟೈಸರ್ ಗಳು, ಟೇಬಲ್ ಗಳು ಹಾಗೂ ಟನಲ್ಗ ಳಲ್ಲದೇ ಇನ್ನಷ್ಟು ಬಿಗಿ ಬಂದೋಬಸ್ತ್ ಗಳನ್ನು ಮಾಡಿಕೊಂಡಿದೆ.
ಇವುಗಳಲ್ಲಿ ಒಂದು, ಕೌಂಟರ್ ಗಳ ಬಳಿ ಕುಡುಕರು ಶಿಸ್ತಾಗಿ ಅಂತರ ಕಾಯ್ದುಕೊಂಡು ನಿಂತುಕೊಳ್ಳಲೆಂದು, ಲಘು ವಿದ್ಯುತ್ ಶಾಕ್ ಹರಿವು ಇರುವ ತಂತಿ ಬೇಲಿಯ ವ್ಯವಸ್ಥೆ ಮಾಡಿಕೊಂಡಿದೆ. ಏಂಥಾ ಶಾಕಿಂಗ್ ಐಡಿಯಾ ಅಲ್ವಾ…?