ಕೊರೋನ ಸಾಂಕ್ರಾಮಿಕ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಅನೇಕ ರಕ್ಷಣಾ ಸಾಧನೆಗಳು ವಿಶ್ವದ ವಿವಿಧ ಕಡೆ ಆವಿಷ್ಕರಿಸಲ್ಪಟ್ಟಿತು.
ಜನಸಾಮಾನ್ಯರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಳಸಬಹುದಾದ ಸಾಧನಗಳು ಗಮನ ಸೆಳೆದವು. ಇದೀಗ ವ್ಯಕ್ತಿಯೊಬ್ಬ ಕೋವಿಡ್ ಛತ್ರಿಯನ್ನು ಕಂಡುಕೊಂಡಿದ್ದು, ಆ ಛತ್ರಿಯ ವೈಶಿಷ್ಟ್ಯ ತೋರಿಸುವ ವಿಡಿಯೋ ತುಣುಕು ವೈರಲ್ ಆಗಿದೆ.
ಛತ್ರಿ ಹಿಡಿದು ನಡೆದು ಬರುವ ಆತ, ತನ್ನ ಸಮೀಪಕ್ಕೆ ಬಂದವರಿಂದ ರಕ್ಷಣೆ ಪಡೆಯಲು ಒಂದು ಬಟನ್ ಒತ್ತುತ್ತಾನೆ. ತಕ್ಷಣವೇ ಛತ್ರಿಯ ಸುತ್ತಲೂ ಪ್ಲಾಸ್ಟಿಕ್ ಪರದೆಯಂತೆ ಕೆಳಗಿಳಿದು ಬಿಡುತ್ತದೆ.
ಈ ವಿಡಿಯೋವನ್ನು ಉದ್ಯಮಿ ಹರ್ಷ ಗೊಯಂಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಮೂವತ್ತೈದು ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿ, ಪ್ರತಿಕ್ರಿಯೆ ನೀಡಿದ್ದಾರೆ.