ಕೊರೋನಾ ವೈರಸ್‌ನ ಹೊಸ ಅವತಾರವೊಂದು ಕಾಣಿಸಿಕೊಂಡ ಕಾರಣ ಕ್ರಿಸ್‌ಮಸ್ ಪ್ರಯುಕ್ತ ಕೋವಿಡ್-19 ನಿರ್ಬಂಧವನ್ನು ಸಡಿಲಿಸುವ ಮಾತುಗಳನ್ನಾಡಿದ್ದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಇದೀಗ ಯೂಟರ್ನ್ ಪಡೆದಿದ್ದಾರೆ.
ಬ್ರಿಟನ್ ಪ್ರಧಾನಿಯ ವೈಜ್ಞಾನಿಕ ಸಲಹಾ ಸಮಿತಿಯಲ್ಲಿರುವ ಪ್ರೊಫೆಸರ್ ನೀಲ್ ಫರ್ಗೂಸನ್ ಈ ನಿರ್ಬಂಧದ ವಿಸ್ತರಣೆಯ ಹಿಂದಿನ ಪ್ರಮುಖ ಶಕ್ತಿಯಾಗಿದ್ದಾರೆ ಎನ್ನಲಾಗಿದೆ.
ಇದೇ ಫರ್ಗೂಸನ್ ಖುದ್ದು ತಾವೇ ಲಾಕ್‌ಡೌನ್ ನಿರ್ಬಂಧವನ್ನು ಮೀರಿ ತಮ್ಮ ಗರ್ಲ್ ಫ್ರೆಂಡ್ ಜೊತೆಗೆ ಕಾಲ ಕಳೆಯಲು ಹೋಗಿ ಸಿಕ್ಕಿ ಬಿದ್ದಿದ್ದರು. ಇದಾದ ಬೆನ್ನಿಗೆ ಫರ್ಗೂಸನ್‌ಗೆ ವೈಜ್ಞಾನಿಕ ಸಲಹಾ ಸಮಿತಿಯನ್ನು ತೊರೆಯಬೇಕಾಗಿ ಬಂದಿತ್ತು.
ಇದೀಗ ಬ್ರಿಟನ್‌ನಲ್ಲಿ ನಾಲ್ಕನೇ ಸುತ್ತಿನ ಲಾಕ್‌ಡೌನ್ ಮೂಲಕ ಕೋವಿಡ್-19 ನಿಯಂತ್ರಣಕ್ಕೆ ತರುವ ಕುರಿತಂತೆ ಸಲಹೆ ಸೂಚನೆಗಳನ್ನು ಕೊಡಲು ಫರ್ಗೂಸನ್ ಮತ್ತೆ ಬಂದಿದ್ದಾರೆ.
ಕೋವಿಡ್-19ನ ಹೊಸ ಅವತಾರವೊಂದು ಕಾಣಿಸಿಕೊಂಡಿದ್ದು, ಇದು ಹಿಂದಿನದ್ದಕ್ಕಿಂತಲೂ ಅಪಾಯಕಾರಿಯಾಗಿದೆ ಎನ್ನಲಾಗಿದ್ದು, ಬ್ರಿಟನ್‌ನಾದ್ಯಂತ ಮಾಧ್ಯಮಗಳು ಆತಂಕ ಸೃಷ್ಟಿ ಮಾಡುತ್ತಿವೆ.