ಬ್ರಿಟನ್ ರಾಣಿ ಎಲಿಜೆಬೆತ್ ಅವರ ಪತಿ ಪ್ರಿನ್ಸ್ ಫಿಲಿಪ್ ವಿಧಿವಶರಾಗಿದ್ದಾರೆ. 99 ವರ್ಷದ ಫಿಲಿಪ್ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು.
73 ವರ್ಷಗಳ ಹಿಂದೆ ಎಲಿಜೆಬೆತ್ ಅವರನ್ನು ಪ್ರಿನ್ಸ್ ಫಿಲಿಪ್ ವಿವಾಹವಾಗಿದ್ದು, ಹೃದಯ ಸಂಬಂಧಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಮಾರ್ಚ್ 16 ರಂದು ಬಿಡುಗಡೆಗೊಂಡು ಅರಮನೆಗೆ ತೆರಳಿದ್ದರು.
ಅರಮನೆ ಮೂಲಗಳು ಪ್ರಿನ್ಸ್ ಫಿಲಿಪ್ ಅವರ ನಿಧನದ ಸುದ್ದಿಯನ್ನು ಖಚಿತಪಡಿಸಿವೆ.