ಬ್ರಿಟನ್‌ನ ಯುವರಾಜ ಹ್ಯಾರಿ ಹಾಗೂ ಮೆಘನ್ ಮಾರ್ಕೆಲ್ ಅವರು ತಮ್ಮ ವಿವಾಹ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಮುಂಬಯಿಯಲ್ಲಿ ಕೋವಿಡ್ ಆರೈಕೆ ಕೇಂದ್ರವೊಂದಕ್ಕೆ ಚಾಲನೆ ನೀಡಲಿದ್ದಾರೆ. ಈ ಮೂಲಕ ಸ್ಥಳೀಯ ಸಮುದಾಯಗಳಿಗೆ ಸಾಂಕ್ರಮಿಕದ ಸಂಕಷ್ಟದಲ್ಲಿ ಸುದೀರ್ಘಾವಧಿಯ ನೆರವು ನೀಡಲು ಈ ದಂಪತಿ ಮುಂದಾಗಿದೆ.
ತಮ್ಮ ಮೂರನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಈ ದಂಪತಿ ಮೇಲ್ಕಂಡ ವಿಚಾರದಲ್ಲಿ ಮಹತ್ವದ ಘೋಷಣೆ ಮಾಡಿದೆ. ಇವರ ನೇತೃತ್ವದ ಆರ್ಚ್‌ವೆಲ್ ಪ್ರತಿಷ್ಠಾನವು ವರ್ಲ್ಡ್ ಸೆಂಟ್ರಲ್ ಕಿಚನ್ ಜೊತೆಗೆ ಸಹಯೋಗದೊಂದಿಗೆ ಸಮುದಾಯ ಕೇಂದ್ರವೊಂದನ್ನು ಸ್ಥಾಪಿಸುವುದಾಗಿ ಮೇ 19ರಂದು ಘೋಷಿಸಿದ್ದಾರೆ.
ನೆಟ್ ಬಳಕೆದಾರರೇ ಗಮನಿಸಿ: ʼಬಂದ್ʼ ಆಗಲಿದೆ internet explorer ಸೇವೆ
ಈ ಜೋಡಿಯು ಸ್ಥಾಪಿಸಲು ನಿರ್ಧರಿಸಿರುವ ನಾಲ್ಕು ಸಮುದಾಯ ಕೇಂದ್ರಗಳಲ್ಲಿ ಮುಂಬಯಿಯದ್ದೂ ಒಂದಾಗಿದೆ. ಪ್ರಾಕೃತಿಕ ವಿಕೋಪಗಳು ಹಾಗೂ ವಿಪತ್ತುಗಳಿಗೆ ಈಡಾಗಿರುವ ಜಗತ್ತಿನ ಇತರ ಮೂರು ಕಡೆಗಳಲ್ಲಿ ಇದೇ ರೀತಿಯ ಸಮುದಾಯ ಕೇಂದ್ರಗಳಿಗೆ ಈ ದಂಪತಿ ಚಾಲನೆ ಕೊಟ್ಟಿದೆ. ಡೊನಿಮಿಕಾ ಹಾಗೂ ಪೋರ್ಟೋರಿಕೋಗಳಲ್ಲೂ ಸಹ ಇದೇ ರೀತಿಯಲ್ಲಿ ಸಮುದಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.