ಕೊರೊನಾ ವೈರಸ್‌ನಿಂದ ಇಡೀ ಜಗತ್ತು ತೊಂದರೆಗೀಡಾಗಿದೆ. ಆದರೆ ಕೆಲವೊಂದು ಪ್ರಯೋಜನ ಲಾಕ್ ಡೌನ್ ನಿಂದಾಗಿದೆ. ಇದ್ರಲ್ಲಿ ಶಿಶುಗಳ ಅಕಾಲಿಕ ಜನನ ಪ್ರಮಾಣವು ತೀವ್ರವಾಗಿ ಕಡಿಮೆಯಾಗಿರುವುದು ಒಂದು. ಈ ಬದಲಾವಣೆಯಿಂದ ವಿಶ್ವದಾದ್ಯಂತದ ವೈದ್ಯರು ಖುಷಿಯಾಗಿದ್ದಾರೆ.
ಇದು ಹೇಗೆ ಸಾಧ್ಯವಾಯ್ತು ಎನ್ನುವ ಬಗ್ಗೆ ಸಂಶೋಧನೆಗೆ ಸಿದ್ಧತೆಗಳು ಪ್ರಾರಂಭವಾಗುತ್ತಿವೆ. ನ್ಯೂಯಾರ್ಕ್ ಟೈಮ್ಸ್ ನಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ಐರ್ಲೆಂಡ್, ಡೆನ್ಮಾರ್ಕ್, ನೆದರ್ಲ್ಯಾಂಡ್ಸ್, ಯುಎಸ್ಎ, ಆಸ್ಟ್ರೇಲಿಯಾದಂತಹ ಅನೇಕ ದೇಶಗಳಲ್ಲಿನ ಆಸ್ಪತ್ರೆಗಳಲ್ಲಿ ನವಜಾತ ತೀವ್ರ ನಿಗಾ ಘಟಕಗಳಲ್ಲಿ ಅಕಾಲಿಕ ಜನನ ಪ್ರಕರಣಗಳು ವೇಗವಾಗಿ ಕಡಿಮೆಯಾಗಿವೆ. ಅಕಾಲಿಕ ಜನನಗಳಿಗೆ ಸಂಬಂಧಿಸಿದ ಸಮಸ್ಯೆಗಳೂ ಸಹ ತೀವ್ರ ಕುಸಿತ ಕಂಡಿದೆ.
ಗರ್ಭಿಣಿಯರು ಲಾಕ್ ಡೌನ್‌ನಲ್ಲಿ ಸಾಕಷ್ಟು ವಿಶ್ರಾಂತಿ ಪಡೆಯುತ್ತಿದ್ದಾರೆ. ಅಲ್ಲದೆ ಮಾಲಿನ್ಯ ಮಟ್ಟ ಕಡಿಮೆಯಾಗಿದೆ. ಹೊರಗಿನ ಆಹಾರ ಮತ್ತು ಪಾನೀಯ ಸೇವನೆಯಿಲ್ಲ. ಮನೆ ಕೆಲಸವನ್ನು ಗರ್ಭಿಣಿ ಮಾಡ್ತಿದ್ದಾಳೆ. ಇವೆಲ್ಲವೂ ಅಕಾಲಿಕ ಜನನ ಪ್ರಮಾಣದಲ್ಲಿ ಇಳಿಕೆಯಾಗಲು ಕಾರಣವೆಂದು ವೈದ್ಯರು ಅಂದಾಜಿಸಿದ್ದಾರೆ. ಈ ಬಗ್ಗೆ ಸಂಶೋಧನೆ ನಂತ್ರ ಸತ್ಯ ಗೊತ್ತಾಗಬೇಕಿದೆ.