
ಗರ್ಭಿಣಿಯೊಬ್ಬಳು ಮೊಬೈಲ್ ನಲ್ಲಿ ಚಿತ್ರೀಕರಿಸುವ ವೇಳೆ ಆಕೃತಿಯೊಂದು ಕಂಡುಬಂದಿದ್ದು ಅದರ ವಿಡಿಯೋ ಈಗ ವೈರಲ್ ಆಗಿದೆ.
ಗರ್ಭಿಣಿಯು ಲೋಕಾಭಿರಾಮವಾಗಿ ಚಿತ್ರೀಕರಣದಲ್ಲಿ ತೊಡಗಿದ್ದು, ಬಳಿಕ ಫುಟೇಜ್ ವೀಕ್ಷಿಸಿದಾಗ ಹಾಸಿಗೆ ಕೊನೆಯಲ್ಲಿ ಕಂದು ಬಣ್ಣದ ಆಕೃತಿ ಕಾಣಿಸಿದೆ. ಅದನ್ನು ನೋಡಿ ಆ ಮಹಿಳೆ ಭಯ ಭೀತಳಾಗಿದ್ದಾಳೆ.
ಆ ವಿಡಿಯೋ ತುಣುಕನ್ನು ಮಹಿಳೆಯ ಸಹೋದರ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ. ವಿಡಿಯೋ ನೋಡಿದವರು ಹಲವಾರು ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ ಇದಕ್ಕೆ ಉತ್ತರಿಸಿರುವ ಆತ, ನನ್ನ ಸಹೋದರಿಯು ನಾಯಿ ಮತ್ತು ಬೆಕ್ಕಿನೊಂದಿಗೆ ಮಾತ್ರ ಮನೆಯಲ್ಲಿದ್ದರು ಎಂದು ಸ್ಪಷ್ಟನೆ ನೀಡಿದ್ದಾರೆ.
ವಿಡಿಯೋದಲ್ಲಿ ಗಮನಿಸಿದಂತೆ, ಒಂದು ಕಂದು ಬಣ್ಣದ ತಲೆ ಹಾಸಿಗೆ ಕೊನೆಯಲ್ಲಿ ಕಾಣಿಸುತ್ತದೆ.
ಮನೆಯಲ್ಲಿ ಇರುವ ಸಾಕುಪ್ರಾಣಿಗಳ 2 ಸಹ ಬಿಳಿಯಾಗಿದೆ. ಆಕೆ ವಿಶ್ರಾಂತಿಯಲ್ಲಿದ್ದಾಗ ಮನೆಯಲ್ಲಿ ಬೇರೆ ಯಾರೂ ಇರಲಿಲ್ಲ ಎಂದೂ ಅಪ್ ಲೋಡ್ ಮಾಡಿದಾತ ಸ್ಪಷ್ಟಪಡಿಸಿದ್ದಾರೆ.