ಸ್ಟೈಲ್ ಹಾಗೂ ಫ್ಯಾಶನ್ ಪ್ರದೇಶದಿಂದ ಪ್ರದೇಶಕ್ಕೆ ಹಾಗೂ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತೆ. ಆದರೆ ಕೆಲವೊಬ್ಬರ ಉಡುಗೆ ಶೈಲಿ ನಗು ತರಿಸೋದೇ ಜಾಸ್ತಿ.
ಇಟಲಿಯ ದುಬಾರಿ ಬ್ರ್ಯಾಂಡ್ ಗುಶ್ಶಿ ಈಗಾಗಲೇ ತನ್ನ ವಿಭಿನ್ನ ಶೈಲಿಯ ಉಡುಗೆಗಳ ಮೂಲಕ ಹೆಸರು ಮಾಡಿದೆ. ಇವರು ಅತ್ಯಂತ ಕೊಳಕಾದ ಶೂಗಳನ್ನ 60 ಸಾವಿರ ರೂಪಾಯಿಗೆ ಮಾರಾಟ ಮಾಡುವ ಮೂಲಕ ಸುದ್ದಿಯಾಗಿತ್ತು.
ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: 7 ಮೆಗಾ ಜವಳಿ ಪಾರ್ಕ್, ಲಕ್ಷಾಂತರ ಮಂದಿಗೆ ಕೆಲಸದ ಭರವಸೆ
ಇದೇ ರೀತಿ ಇಟಲಿಯ ಇನ್ನೊಂದು ಐಷಾರಾಮಿ ಬ್ರ್ಯಾಂಡ್ ಬೇಸಿಗೆ ಕಾಲಕ್ಕೆ ಸೂಕ್ತವಾಗಬಲ್ಲ ಟೀ ಶರ್ಟ್ವೊಂದನ್ನ ಬಿಡುಗಡೆ ಮಾಡಿದ್ದು ಇದನ್ನ ಕಂಡ ನೆಟ್ಟಿಗರು ಶಾಕ್ ಆಗಿದ್ದಾರೆ.
ಕ್ರೀಂ ಬಣ್ಣದ ಟೀ ಶರ್ಟ್ ನೋಡೋಕೆ ಥೇಟ್ ಚೀಸ್ನಂತೆಯೇ ಇದೆ. ಅಂದ ಹಾಗೆ ಈ ಟೀಶರ್ಟ್ ಬೆಲೆ ಕೇಳಿದ್ರೆ ಇನ್ನೂ ತಲೆ ತಿರುಗುತ್ತೆ. ಈ ರಂಧ್ರಗಳುಳ್ಳ ಟೀ ಶರ್ಟ್ಗೆ ಬರೋಬ್ಬರಿ 90 ಸಾವಿರ ರೂಪಾಯಿ ನಿಗದಿ ಮಾಡಲಾಗಿದೆ.