ಇತ್ತೀಚಿನ ದಿನಗಳಲ್ಲಿ ಹಿರಿಯ ನಾಗರಿಕರು ಹೆಚ್ಚು ಹೆಚ್ಚು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದು, ಇದರಿಂದ ಅವರ ಒಂಟಿತನ ದೂರಾಗಿ ಸದಾ ಲವಲವಿಕೆಯಿಂದ ಇರಲು ಅನುಕೂಲ ಆಗಿದೆ.
ಅದರಲ್ಲೂ ಅವರು ಮಾಡಿದ ಪೋಸ್ಟ್ ಗಳಿಗೆ ಹೆಚ್ಚು ಲೈಕ್ಸ್, ಕಮೆಂಟ್ಸ್ ಸಿಕ್ಕರಂತೂ ಅವರಿಗೆ ಭಾರೀ ಸ್ಪಂದನೆ ಸಿಕ್ಕಷ್ಟು ಖುಷಿಪಡುತ್ತಾರೆ. ಜಾಲತಾಣಗಳು ವೃದ್ಧಾಪ್ಯದಲ್ಲಿ ಆಸರೆಯಾಗಿವೆ.
ಈ ಬಗ್ಗೆ ದಕ್ಷಿಣ ಕೊರಿಯಾದ ಕೂಕ್ಮಿನ್ ವಿವಿ ಸಹಾಯಕ ಪ್ರಾಧ್ಯಾಪಕ ಇಯೂನ್ ಹ್ವಾ ಜಂಗ್ ಪ್ರತಿಕ್ರಿಯಿಸಿದ್ದು, ತಂತ್ರಜ್ಞಾನಗಳು ವೃದ್ಧರ ನೆರವಿಗೆ ಬರುತ್ತಿವೆ. ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.
ಅಮೆರಿಕಾದ ಪೆನ್ಸಿಲ್ವೇನಿಯಾ ರಾಜ್ಯ ವಿವಿ ಪ್ರಾಧ್ಯಾಪಕ ಹಾಗೂ ಸಂಶೋಧಕ ಎಸ್. ಶ್ಯಾಮ್ ಸುಂದರ್ ಕೂಡ ಸದಾಭಿಪ್ರಾಯ ವ್ಯಕ್ತಪಡಿಸಿದ್ದು, ಅವರ ಪೋಸ್ಟ್ ಗಳಿಗೆ ಹೆಚ್ಚು ಮೆಚ್ಚುಗೆ ಸಿಕ್ಕಷ್ಟೂ ಪ್ರೋತ್ಸಾಹ ಸಿಕ್ಕಂತಾಗುತ್ತದೆ. ಹೆಚ್ಚು ಪೋಸ್ಟ್ ಮಾಡಲು ಶುರು ಮಾಡುತ್ತಾರೆ. ಅವರ ಅನುಭವಗಳು ಮುಂದಿನ ಪೀಳಿಗೆಗೆ ಸಿಗುತ್ತವೆ ಎಂದಿದ್ದಾರೆ.