ಕೋವಿಡ್-19 ಸಾಂಕ್ರಮಿಕದ ಉಗಮ ಸ್ಥಾನವಾದ ಚೀನಾದ ವುಹಾನ್‌ನಲ್ಲಿ, ಈ ಪೀಡೆ ಭುಗಿಲೆದ್ದ ವರ್ಷದ ಬಳಿಕ ಜನ ತಂತಮ್ಮ ದೈನಂದಿನ ಚಟುವಟಿಕೆಗಳಿಗೆ ಮರಳುತ್ತಿದ್ದಾರೆ.
ನಗರಾದ್ಯಂತ ಕಟ್ಟುನಿಟ್ಟಿನ ಲಾಕ್‌ಡೌನ್ ಇದ್ದ ಕಾರಣದಿಂದಾಗಿ, ಈ ಸೋಂಕು ಹರಡುವುದು ನಿಂತು ಏಳು ತಿಂಗಳುಗಳು ಕಳೆದಿವೆ. ವುಹಾನ್ ನಗರವು 11 ದಶಲಕ್ಷ ಮಂದಿಗೆ ಮನೆಯಾಗಿದೆ.
ಅತ್ಯಂತ ಕಠಿಣ ವರ್ಷವನ್ನು ಕಂಡ ವುಹಾನ್ ನಗರವಾಸಿಗಳು 2021ರಲ್ಲಿ ಒಳ್ಳೆಯ ದಿನಗಳನ್ನು ನೋಡುವ ಆಶಾವಾದದೊಂದಿಗೆ ಇದ್ದಾರೆ. ಇದೇ ವೇಳೆ ತಮ್ಮ ನೆನಪುಗಳನ್ನು ನಗರವಾಸಿಗಳು ಆನ್ಲೈನ್‌ನಲ್ಲಿ ಫೋಟೋಗಳ ರೂಪದಲ್ಲಿ ಶೇರ್ ಮಾಡಿಕೊಂಡಿರುವುದು ಎಲ್ಲೆಡೆ ವೈರಲ್ ಆಗಿದೆ.