ಲಂಡನ್: ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಅಭಿವೃದ್ಧಿಪಡಿಸಿದ ಕೊರೋನಾ ಲಸಿಕೆ ಯಶಸ್ಸಿನ ಕುರಿತಾದ ವರದಿ ಯಾವುದೇ ಕ್ಷಣದಲ್ಲಿ ಬಿಡುಗಡೆಯಾಗಬಹುದು ಎಂದು ಹೇಳಲಾಗಿದೆ.
ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಸಂಶೋಧಕರ ತಂಡ ಆಸ್ಟ್ರಾಜೆನಿಕಾ ಕಂಪನಿ ಸಹಯೋಗದಲ್ಲಿ ಕೊರೊನಾ ಸೋಂಕು ತಡೆಯಲು ಸಿದ್ಧಪಡಿಸಿದ ಲಸಿಕೆಯ ಮಾನವ ಕ್ಲಿನಿಕಲ್ ಪ್ರಯೋಗ ಯಶಸ್ವಿಯಾಗಿ ಮುಂದುವರೆದಿದೆ. ಈ ಪ್ರಯೋಗದ ಪರೀಕ್ಷೆ ಅಂತಿಮ ಹಂತದಲ್ಲಿದ್ದು ಸಂಶೋಧನೆಯ ಆರಂಭಿಕ ಹಂತದ ಫಲಿತಾಂಶ ಯಾವುದೇ ಕ್ಷಣದಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ.
ಇನ್ನು ಬ್ರೆಜಿಲ್ ನಲ್ಲಿ ಸಾವಿರಾರು ಜನ ಕೊರೊನಾ ಸೋಂಕಿತರ ಮೇಲೆ ಲಸಿಕೆಯ ಪರೀಕ್ಷೆ ಮುಂದುವರೆಸಲಾಗಿದೆ. ಈ ಲಸಿಕೆ ಮನುಷ್ಯರಲ್ಲಿ ಪ್ರತಿರೋಧಕ ಶಕ್ತಿಯನ್ನು ಉಂಟುಮಾಡುತ್ತದೆ. ವೈರಸ್ ಗಳನ್ನು ನಾಶಪಡಿಸುತ್ತದೆ ಎನ್ನುವುದು ಪ್ರಯೋಗದಲ್ಲಿ ಕಂಡುಬಂದಿರುವುದಾಗಿ ಐಟಿವಿ ಸುದ್ದಿ ಸಂಸ್ಥೆಯ ರಾಬರ್ಟ್ ಪೆಸ್ಟೋನ್ ಮಾಹಿತಿ ನೀಡಿದ್ದಾರೆ.