
ಮಿಸ್ಟರ್ ಬೀಸ್ಟ್ ಎಂದೇ ಖ್ಯಾತರಾದ ಜಿಮ್ಮಿ ಡೊನಾಲ್ಡ್‌ಸನ್ ಎಂಬ ಯೂಟ್ಯೂಬರ್ ಒಬ್ಬರು ತಮ್ಮ ಚಕಿತಗೊಳಿಸುವ ವಿಡಿಯೋಗಳ ಮೂಲಕ ಫೇಮಸ್ ಆಗಿದ್ದಾರೆ. ನಂಬಲರ್ಹವಾದ ಕೆಲಸಗಳನ್ನು ಮಾಡುವ ಮೂಲಕ ಖ್ಯಾತನಾಮರಾಗಿರುವ ಈತ ಇತ್ತೀಚೆಗೆ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದರು.
ಡೀಲರ್‌ಶಿಪ್‌ನಲ್ಲಿರುವ ಎಲ್ಲಾ ಕಾರುಗಳನ್ನು ಖರೀದಿಸಿ, ತಮ್ಮ ಪ್ರದೇಶದ ಎಲ್ಲಾ ನಾಯಿಗಳಿಗೂ ಸೂರು ಕಲ್ಪಿಸಿದ್ದಲ್ಲದೇ, ಅಪರಿಚಿತ ಮಂದಿಗೆ ಆರ್ಥಿಕ ಸಂಸ್ಥೆಯೊಂದನ್ನು ಆರಂಭಿಸಿದ್ದ ಡೊನಾಲ್ಡ್‌ಸನ್, 2 ಕೋಟಿಗೂ ಅಧಿಕ ಟಿಂಬರ್ ಮರಗಳನ್ನು ನೆಟ್ಟಿದ್ದಾರೆ.
ಇದೀಗ ತಮ್ಮ ಹೊಸ ವಿಡಿಯೋ, ‘I Ate The World’s Largest Slice of Pizza’ ಮೂಲಕ ವೃತ್ತಿಪರ ಪಿಜ್ಝಾ ಈಟರ್ ಒಬ್ಬರಿಗೆ ಸವಾಲೆಸೆಯಲು ಮುಂದಾಗಿದ್ದರು ಡೊನಾಲ್ಡ್‌ಸನ್. ಕೇವಲ 10 ನಿಮಿಷಗಳಲ್ಲಿ 75 ಹಾಟ್ ಡಾಗ್‌ಗಳನ್ನು ತಿಂದಿರುವ ದಾಖಲೆ ಹೊಂದಿರುವ ಜೋಯೆ ಚೆಸ್ಟ್‌ನಟ್‌ರನ್ನು ಮಿ.ಬೀಸ್ಟ್ ಆಹ್ವಾನಿಸಿದ್ದರು.
ಎಂಟು ಕೆಜಿಯಷ್ಟಿರುವ ಪಿಜ್ಝಾವನ್ನು ತಿನ್ನಲು ಜೋಯೆ ಜೊತೆಗೆ ತಮ್ಮ ಗೆಳೆಯರಾದ ಕ್ರಿಸ್ ಹಾಗೂ ಚಾಂಡ್ಲರ್‌ರನ್ನು ಡೊನಾಲ್ಡ್‌ಸನ್ ಆಹ್ವಾನಿಸಿದ್ದರು. ಬರೀ 20 ನಿಮಿಷಗಳ ಅವಧಿಯಲ್ಲಿ ಪಿಜ್ಝಾ ತಿನ್ನಲಾಗದೇ ಡೊನಾಲ್ಡ್‌ಸನ್ ಹಾಗೂ ಆತನ ಗೆಳೆಯರು ಸುಸ್ತಾಗಿದ್ದರೆ, ಇತ್ತ ಚೆಸ್ಟ್‌ನಟ್ ತಿನ್ನುವುದನ್ನು ಮುಂದುವರೆಸಿದ್ದರು. ಆತ ಬರೀ 30 ನಿಮಿಷಗಳ ಒಳಗೆ ಇಡಿಯ ಪಿಜ್ಝಾವನ್ನೇ ತಿಂದು ಮುಗಿಸಿದ್ದ.