
ಎರಡು ಮೃತದೇಹಗಳಲ್ಲಿ ಒಂದು ಶ್ರೀಮಂತ ಮನೆಯ ವ್ಯಕ್ತಿ ಹಾಗೂ ಇನ್ನೊಂದು ಅವರ ಗುಲಾಮ ಇರಬಹುದು ಅಂತಾ ಪೊಂಪೈ ಪುರಾತತ್ವ ಇಲಾಖೆ ತಜ್ಞರು ಹೇಳಿದ್ದಾರೆ.
ಶ್ರೀಮಂತ ವ್ಯಕ್ತಿ 30ರಿಂದ 40ರ ಆಸುಪಾಸಿನವನು ಎಂದು ಅಂದಾಜಿಸಲಾಗಿದೆ. ಶ್ರೀಮಂತರು ಧರಿಸುತ್ತಿದ್ದ ಉಣ್ಣೆಯ ಧಿರಿಸಿನ ಕುರುಹುಗಳು ಪತ್ತೆಯಾಗಿರೋದ್ರಿಂದ ಇವನು ಉನ್ನತ ಸ್ಥಾನಮಾನದ ವ್ಯಕ್ತಿಯಾಗಿದ್ದಿರಬಹುದು ಎಂದು ಅಂದಾಜಿಸಲಾಗಿದೆ.
ಇನ್ನೊಬ್ಬ ವ್ಯಕ್ತಿ ಬಹುಶಃ 18-23 ವರ್ಷದೊಳಗಿನವನು ಎಂದು ಅಂದಾಜಿಸಲಾಗಿದೆ. ಈತ ಗುಲಾಮರು ಧರಿಸುವ ಉಡುಗೆ ಹಾಕಿದ್ದು ಮಾತ್ರವಲ್ಲದೇ ಈತನ ಬೆನ್ನುಮೂಳೆ ಸವೆದಿರೋದ್ರಿಂದ ಈತ ಒಬ್ಬ ಗುಲಾಮನಿರಬಹುದು ಎಂದು ಅಂದಾಜಿಸುವಂತೆ ಮಾಡಿದೆ.
ಪ್ರಾಚೀನ ಪೊಂಪೆಯ ಮಧ್ಯಭಾಗದಿಂದ 700 ಮೀಟರ್ ವಾಯುವ್ಯದಲ್ಲಿರುವ ಸಿವಿಟಾ ಗಿಯುಲಿಯಾನ ಎಂಬ ದೊಡ್ಡ ಹಳ್ಳಿಯಲ್ಲಿ ಈ ಅವಶೇಷಗಳು ಪತ್ತೆಯಾಗಿದೆ ಅಂತಾ ಖಾಸಗಿ ಮಾಧ್ಯಮ ಹೇಳಿದೆ.