alex Certify ವ್ಯಾಪಾರಿಗಳ ಸಂಕಷ್ಟಕ್ಕೆ ಮರುಗಿ ಸರ್ಕಾರಿ ಆದೇಶವನ್ನು ಲೆಕ್ಕಿಸದೆ ನೆರವಾದ ಜನತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವ್ಯಾಪಾರಿಗಳ ಸಂಕಷ್ಟಕ್ಕೆ ಮರುಗಿ ಸರ್ಕಾರಿ ಆದೇಶವನ್ನು ಲೆಕ್ಕಿಸದೆ ನೆರವಾದ ಜನತೆ

ಕೊರೊನಾ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಪೊಲ್ಯಾಂಡ್​ ಸರ್ಕಾರ ಎಲ್ಲ ಸ್ಮಶಾನಗಳನ್ನ ಬಂದ್​ ಮಾಡಲು ಆದೇಶಿಸಿತ್ತು. ಸರ್ಕಾರದ ಆದೇಶದಿಂದ ಕಂಗಾಲಾಗಿದ್ದ ಹೂವಿನ ವ್ಯಾಪಾರಸ್ಥರಿಗೆ ಸಾರ್ವಜನಿಕರು ನೆರವಾಗಿದ್ದಾರೆ.

ನವೆಂಬರ್​ 1ನೇ ತಾರೀಖನ್ನ ಕ್ಯಾಥೋಲಿಕ್​ ರಾಷ್ಟ್ರಗಳು ಆಲ್​ ಸೇಂಟ್ಸ್ ಡೇ ಎಂದು ಆಚರಿಸುತ್ತವೆ. ಹ್ಯಾಲೋವನ್​ ದಿನದ ಮತ್ತೊಂದು ರೂಪವೇ ಆಲ್​ ಸೇಂಟ್ಸ್ ಡೇ. ಈ ದಿನ ಅಗಲಿದ ಕುಟುಂಬಸ್ಥರ ಸಮಾಧಿಗೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಲಾಗುತ್ತೆ.

ಹೀಗಾಗಿ ಉತ್ತಮ ವ್ಯಾಪಾರದ ನಿರೀಕ್ಷೆಯಲ್ಲಿದ್ದ ಹೂವಿನ ಮಾರಾಟಗಾರರಿಗೆ ಕೊನೆಯ ಕ್ಷಣದಲ್ಲಿ ಸರ್ಕಾರ ಆಘಾತ ನೀಡಿದೆ. ಸ್ಮಶಾನ ಬಂದ್​ ಆಗಲಿದೆ ಎಂಬ ಸುದ್ದಿ ತಿಳಿದ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.

ಆದರೆ ಮಾರಾಟಗಾರರ ಈ ಕಷ್ಟದ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಸುದ್ದಿಯಾಗ್ತಿದ್ದಂತೆ ಎಚ್ಚೆತ್ತ ಸಾರ್ವಜನಿಕರು. ಹೂವುಗಳನ್ನ ಖರೀದಿಸಿ ಸ್ಮಶಾನದ ಬಾಗಿಲಿನಲ್ಲಿ ಇಟ್ಟು ಬರುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅಲ್ಲದೇ ಕ್ಯಾಥೋಲಿಕ್​ ರಾಷ್ಟ್ರದ ಮುಖ್ಯ ಆಚರಣೆಗೆ ತಡೆ ನೀಡಿದ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಜನರು ಆಡಳಿತ ಪಕ್ಷದ ಕಚೇರಿ ಎದುರು ಹೂವುಗಳನ್ನ ಇಟ್ಟು ಬರುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...