alex Certify ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವಕನಿಗೆ ʼಐ ಲವ್​ ಯೂʼ ಎಂದ ಪೊಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವಕನಿಗೆ ʼಐ ಲವ್​ ಯೂʼ ಎಂದ ಪೊಲೀಸ್

ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವಕನನ್ನ ಪೊಲೀಸರು ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ಘಟನೆ ಯುಎಸ್​ನಲ್ಲಿ ನಡೆದಿದೆ.
ಪಾರ್ಕಿಂಗ್​ ಗ್ಯಾರೇಜ್​ನ ಅಂಚಿನಲ್ಲಿ ನಿಂತಿದ್ದ ವ್ಯಕ್ತಿ ಸೂಸೈಡ್​ಗೆ ಟ್ರೈ ಮಾಡ್ತಿದ್ದ ಎಂಬ ವಿಚಾರವಾಗಿ ಪೊಲೀಸರಿಗೆ ಕರೆ ಬಂದಿದೆ.

ಕೂಡಲೇ ಎಚ್ಚೆತ್ತ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಆತನ ಜೀವವನ್ನ ಬಚಾವ್​ ಮಾಡಲು ಯತ್ನಿಸಿದ ಅಧಿಕಾರಿ ಎರಿಕ್​ ನುಟ್ಟೆಲ್​ ಯುವಕನ ಜೊತೆ ಮಾತುಕತೆ ಆರಂಭಿಸಿದ್ದಾರೆ.

ಸುಮಾರು 10 ನಿಮಿಷಗಳ ಕಾಲ ಆ ವ್ಯಕ್ತಿಯ ಜೊತೆ ಮಾತನಾಡುತ್ತಲೇ ಪಾರ್ಕಿಂಗ್​​ ಗ್ಯಾರೇಜ್​ ಬಳಿ ಬಂದ ಅಧಿಕಾರಿ ಆತನ ಕಾಲನ್ನ ಹಿಡಿದು ಎಳೆಯೋ ಮೂಲಕ ರಕ್ಷಣೆ ಮಾಡಿದ್ದಾರೆ. ವ್ಯಕ್ತಿಯನ್ನ ಕಟ್ಟಡದ ಅಂಚಿನಿಂದ ಎಳೆದ ನಂತರ ಅಧಿಕಾರಿಗಳು ಅವನನ್ನ ಅಪ್ಪಿಕ್ಕೊಂಡಿದ್ದಾರೆ. ಹಾಗೂ ನಾನು ನಿನ್ನನ್ನ ಪ್ರೀತಿಸುತ್ತೇನೆ ಎಂದು ಹೇಳಿ ಸಮಾಧಾನ ಮಾಡಿದ್ದಾರೆ .

ಬಳಿಕ ಆ ವ್ಯಕ್ತಿಯನ್ನ ಅಟ್ಲಾಂಟಿಕೇರ್​ ಪ್ರಾದೇಶಕ ವೈದ್ಯಕೀಯ ಕೇಂದ್ರಕ್ಕೆ ದಾಖಲು ಮಾಡಲಾಗಿದೆ. ಅಟ್ಲಾಂಟಿಕ್​ ನಗರ ಪೊಲೀಸರು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಈ ವಿಡಿಯೋವನ್ನ ಹಂಚಿಕೊಂಡಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...