
ಪೊಲೀಸ್ ಕಾರ್ಯಾಚರಣೆ ವೇಳೆ ಗುಂಡೇಟು ತಿಂದಿದ್ದ ಶ್ವಾನ ಅರ್ಲೋ, ಶಸ್ತ್ರಚಿಕಿತ್ಸೆ ನಂತರ ಬದುಕಿ ಬಂದಿದ್ದು ಅದ್ಧೂರಿ ಸ್ವಾಗತ ಕೋರಲಾಗಿದೆ.
ವಾಷಿಂಗ್ಟನ್ ನ ಥರ್ಸಟನ್ ಕೌಂಟ್ರಿಯ ಪೊಲೀಸ್ ಅಧಿಕಾರಿಯ ಸುಪರ್ದಿಯಲ್ಲಿದ್ದ ಕೆ9 ಪೊಲೀಸ್ ಶ್ವಾನ ಅರ್ಲೋ, ಭುಜ ಮತ್ತು ಬೆನ್ನಿನ ಭಾಗಕ್ಕೆ ಗುಂಡು ತಗುಲಿತ್ತು.
ಹಲವು ಶಸ್ತ್ರ ಚಿಕಿತ್ಸೆಗಳ ನಂತರ ಗುಂಡು ಹೊರತೆಗೆಯಲಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ಅರ್ಲೋಗೆ ಪೊಲೀಸರು ಆತ್ಮೀಯ ಸ್ವಾಗತ ಕೋರಿದರು.
ಆಸ್ಪತ್ರೆಯಿಂದ ಮಂಕಾಗಿ ಕುಂಟುತ್ತಾ ಬಂದ ಅರ್ಲೋನನ್ನು ಕಂಡು ಪೊಲೀಸ್ ಅಧಿಕಾರಿಗಳೂ ಬೇಸರಗೊಂಡರು. ಆಸ್ಪತ್ರೆಯ ಬಾಗಿಲು ತೆರೆಯಿತ್ತಿದ್ದಂತೆ, ಬಾಗಿಲಿನ ಎರಡೂ ಬದಿಯಲ್ಲಿ ನಿಂತು ಸ್ವಾಗತಿಸಲಾಯಿತು.
ಬಳಿಕ ಪೊಲೀಸ್ ವಾಹನದಲ್ಲಿಯೇ ಕಚೇರಿಗೆ ಕರೆತರಲಾಯಿತು. ಕಚೇರಿಯಲ್ಲಿಯೂ ಅಧಿಕಾರಿಗಳು ಚಪ್ಪಾಳೆ ತಟ್ಟಿ ಸ್ವಾಗತಿಸಿದರು.
https://www.facebook.com/watch/?v=1696947043808386&t=0