ಬಾಲಿವುಡ್ನಲ್ಲಿ ‘ನಾಯಕ್’ ಸೆನ್ಸೇಶನ್ ಸೃಷ್ಟಿಸಿದ ಚಿತ್ರ. ಸಾಮಾನ್ಯನೊಬ್ಬ ಒಂದು ದಿನದ ಮಟ್ಟಿಗೆ ಸಿಎಂ ಆಗಿ ಜವಾಬ್ದಾರಿ ನಿರ್ವಹಿಸುವ ಚಿತ್ರವದು.
ಅ ಚಿತ್ರದಲ್ಲಿ, ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ನಟಿಸಿರುವ ಅಮರೀಶ್ ಪುರಿ, ತಮ್ಮ ಅಧಿಕಾರದ ಸ್ಥಾನವನ್ನು ಅನಿಲ್ ಕಪೂರ್ಗೆ 24 ಗಂಟೆಗಳ ಕಾಲ ಸ್ವಯಂಪ್ರೇರಣೆಯಿಂದ ಬಿಟ್ಟುಕೊಡುತ್ತಾರೆ, ಇದರ ಪರಿಣಾಮವಾಗಿ ಮುಂಬೈ ನಗರದಲ್ಲಿ ಕೆಲವು ತ್ವರಿತ ಮತ್ತು ಸಕಾರಾತ್ಮಕ ಬದಲಾವಣೆ ಕಾಣಿಸುತ್ತದೆ.
ಇಂತಹ ಅತಿರೇಕ ಎನಿಸಬಹುದಾದ ನಿರ್ಧಾರ ರಿಯಲ್ ಜೀವನದಲ್ಲಿ ಅಸಾಧ್ಯ. ಆದರೆ, ಇತ್ತೀಚೆಗೆ ಫಿನ್ಲ್ಯಾಂಡ್ ನಲ್ಲಿ ಆ ರೀತಿಯ ಬೆಳವಣಿಗೆ ನಡೆದಿದೆ.
ಆ ದೇಶದಲ್ಲಿ ಬಾಲಕಿಯರ ಹಕ್ಕುಗಳನ್ನು ಉತ್ತೇಜಿಸುವ ಅಭಿಯಾನದ ಭಾಗವಾಗಿ ಫಿನ್ನಿಷ್ ಪ್ರಧಾನಿ 16 ವರ್ಷದ ಬಾಲಕಿಗೆ ತನ್ನ ಅಧಿಕಾರವನ್ನು ಹಸ್ತಾಂತರಿಸಿದ್ದರು.
ದಕ್ಷಿಣ ಫಿನ್ಲ್ಯಾಂಡ್ನ ವಾಸ್ಕಿಯ ಆವಾ ಮುರ್ಟೊ ಈ ರೋಮಾಂಚಕಾರಿ ಅವಕಾಶ ಪಡೆದಿದ್ದರು. ಆವಾ ಹವಾಮಾನ ಬದಲಾವಣೆಗಳು ಮತ್ತು ಮಾನವ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಕ್ರಿಯ ಪ್ರಚಾರಕರಾಗಿದ್ದಾರೆ. ಅವರು ಅಭಿವೃದ್ಧಿ ಮತ್ತು ವಿದೇಶಿ ವ್ಯಾಪಾರ ವಿಚಾರದಲ್ಲಿ ಹಲವು ಸಂಸದರು ಮತ್ತು ಸಚಿವರೊಂದಿಗೆ ಮಾತನಾಡಿದರು.