
ಸಿಂಗಪುರ ಏರ್‌ಲೈನ್ಸ್‌ನ ಪ್ರಯಾಣಿಕರೊಬ್ಬರು ವಿಮಾನ ಇನ್ನೇನು ಲ್ಯಾಂಡ್ ಆಗಬೇಕು ಎನ್ನುವಷ್ಟರಲ್ಲಿ ಕಂಡು ಬಂದ ಯುಎಫ್‌ಓ (ಆಗಸದಲ್ಲಿ ಕಂಡು ಬರುವ ನಿಗೂಢ ವಸ್ತು) ಚಿತ್ರವೊಂದನ್ನು ಸೆರೆ ಹಿಡಿದಿದ್ದಾರೆ.
ಜನವರಿ 17ರಂದು ಜ್ಯೂರಿಚ್ ನತ್ತ ಹೊರಟಿದ್ದ ಈ ವಿಮಾನವು ಬೆಳಿಗ್ಗೆ 7:30 – 7:50ರ ಅವಧಿಯಲ್ಲಿ ಇನ್ನೇನು ಲ್ಯಾಂಡ್ ಆಗಬೇಕು ಎನ್ನುವಷ್ಟರಲ್ಲಿ ಈ ಪ್ರಯಾಣಿಕ ತನ್ನ ಮೊಬೈಲ್ ಫೋನ್‌ನಲ್ಲಿ ವಿಡಿಯೋ ಮಾಡಿಕೊಳ್ಳಲು ಮುಂದಾಗಿದ್ದಾರೆ. ಇದೇ ವೇಳೆ ಅನಾಮಿಕವಾದ ಹಾರುವ ವಸ್ತುವೊಂದು ವಿಮಾನದ ಹತ್ತಿರವೇ ಸಾಗುತ್ತಿರುವುದು ಸಹ ವಿಡಿಯೋದಲ್ಲಿ ದಾಖಲಾಗಿದೆ.
ಸ್ವಿಸ್ ಪ್ರಕೃತಿ ಸೌಂದರ್ಯದ ಪಕ್ಷಿ ನೋಟವನ್ನು ನೋಡುತ್ತಿರುವಂತೆಯೇ ಬೆಳ್ಳನೆಯ ಅನಾಮಿಕ ವಸ್ತುವೊಂದು ಇನ್ನೇನು ವಿಮಾನಕ್ಕೆ ಢಿಕ್ಕಿ ಹೊಡೆಯುವಂತೆ ಕಂಡಿದೆ.
https://www.youtube.com/watch?v=Z7RtbL_aUPg&feature=emb_logo