ಅಮೆರಿಕಾಕ್ಕೆ ಸೇರಿದ ಯುಎ 349 ವಿಮಾನದ ಗಾಜಿಗೆ ಆಲಿಕಲ್ಲು ಬಡಿದ ಕಾರಣ ವಿಮಾನ ತುರ್ತು ಭೂ ಸ್ಪರ್ಶ ಮಾಡಿದೆ. ಚಿಕಾಗೋದಿಂದ ಪ್ರಯಾಣಿಕರ ಸಮೇತ ಹೊರಟಿದ್ದ ಈ ವಿಮಾನಕ್ಕೆ ಆಲಿಕಲ್ಲು ಮಳೆ ಎದುರಾಗಿದೆ.
ಆದರೂ ಪೈಲಟ್ ವಿಮಾನದ ಹಾರಾಟ ಮುಂದುವರಿಸಿದ್ರು. ಆದರೆ ಆಲಿಕಲ್ಲು ನೇರವಾಗಿ ವಿಮಾನದ ವಿಂಡ್ ಶೀಲ್ಡ್ಗೆ ಬಂದು ಬಡಿದಿದೆ.ಇದರಿಂದಾಗಿ ವಿಂಡ್ಶೀಲ್ಡ್ ಸಂಪೂರ್ಣ ಬಿರುಕು ಬಿಟ್ಟಿದೆ. ಹೀಗಾಗಿ ಮಿಚಿಗನ್ ಸರೋವರದ ಸಮೀಪ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ.
ಪೈಲಟ್ನ ಸಮಯಪ್ರಜ್ಞೆಯಿಂದಾಗಿ ಯಾವುದೇ ಅವಘಡ ಸಂಭವಿಸಿಲ್ಲ. ಇದೇ ವಿಮಾನದಲ್ಲಿ ಪ್ರಯಾಣ ಮಾಡ್ತಿದ್ದ ಪ್ರಯಾಣಿಕ ಅಲೆಕ್ಸ್ ಲ್ಯಾಂಗ್ ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಬಿರುಕುಬಿಟ್ಟ ವಿಮಾನದ ಗಾಜಿನ ಫೋಟೋವೊಂದನ್ನ ಶೇರ್ ಮಾಡಿದ್ದಾರೆ.
https://twitter.com/ArexRang/status/1315752217190727685?ref_src=twsrc%5Etfw%7Ctwcamp%5Etweetembed%7Ctwterm%5E1315752217190727685%7Ctwgr%5Eshare_3&ref_url=https%3A%2F%2Fwww.ndtv.com%2Foffbeat%2Fplane-turns-around-after-hail-cracks-windshield-2309305