ಹೆಚ್ಚು ತರಕಾರಿಗಳನ್ನು ಬೆಳೆಯುತ್ತಾ ತಮ್ಮ ಮಕ್ಕಳೊಂದಿಗೆ ಹೆಚ್ಚು ಕಾಲವನ್ನು ಕಳೆಯುತ್ತಾ ಇರುವವರೆಗೂ ಜಾಂಬಿಯಾ ದೇಶದ ಗ್ರಾಮೀಣ ಪ್ರದೇಶದ ಮಹಿಳೆಯರ ಜೀವನದ ಗುಣಮಟ್ಟದಲ್ಲಿ ಗಣನೀಯ ಬದಲಾವಣೆ ಕಂಡು ಬಂದಿದೆ ಎಂದು ಸ್ಟಾನ್‌ಫೋರ್ಡ್ ವಿವಿಯ ಸಂಶೋಧಕರು ತಿಳಿಸಿದ್ದಾರೆ.
ಜಾಂಬಿಯಾದ 434 ಗ್ರಾಮಗಳಲ್ಲಿ ಅಧ್ಯಯನ ನಡೆಸಿದ ಸಂಶೋಧಕರು, ಪೈಪ್ ನೀರಿನ ಲಭ್ಯತೆ ಕಾರಣದಿಂದ ಸಾಮುದಾಯಿಕ ನೀರಿನ ಮೂಲದತ್ತ ನಡೆಯುವುದು ತಪ್ಪಿದ ಕಾರಣ ಪ್ರತಿ ಮನೆಗೂ ವಾರ್ಷಿಕ 200 ಗಂಟೆಗಳ ಉಳಿತಾಯವಾಗುತ್ತಿದ್ದು, ಜನರು ರಚನಾತ್ಮಕ ಕೆಲಸಗಳಿಗೆ ಇನ್ನಷ್ಟು ಅವಧಿಯನ್ನು ವ್ಯಯಿಸಬಹುದಾಗಿದೆ.
“ನೀರಿನ ಸಮಸ್ಯೆಯನ್ನು ಶಮನ ಮಾಡುವುದರಿಂದ ಮಹಿಳೆಯರು ಹಾಗು ಹೆಣ್ಣು ಮಕ್ಕಳಿಗೆ ತಂತಮ್ಮ ಮನೆಗಳ ಆರೋಗ್ಯ ಹಾಗೂ ಆರ್ಥಿಕ ಪರಿಸ್ಥಿತಿಗಳ ಮೇಲೆ ಇನ್ನಷ್ಟು ಸಮಯ ವ್ಯಯಿಸಲು ಅವಕಾಶ ಸಿಗುತ್ತದೆ. ಈ ಮೂಲಕ ಪೌಷ್ಠಿಕ ಆಹಾರ ಉತ್ಪಾದನೆ ಹಾಗೂ ಆದಾಯ ಮೂಲಗಳನ್ನು ಕಂಡುಕೊಳ್ಳಲು ಹೆಣ್ಣುಮಕ್ಕಳಿಗೆ ಸಾಧ್ಯವಾಗಿದೆ” ಎನ್ನುತ್ತಾರೆ ಅಂತಾರಾಷ್ಟ್ರೀಯ ಜಲ ನಿರ್ವಹಣಾ ಸಂಸ್ಥೆಯ ವಿಜ್ಞಾನಿ ಬಾರ್ಬರಾ ವಾನ್ ಕಾಪೆನ್.
ಜಾಗತಿಕವಾಗಿ 84.4 ಕೋಟಿ ಜನರಿಗೆ ಅಡುಗೆಗೆ ಹಾಗೂ ಕುಡಿಯಲು ಅಲ್ಲದೇ ಬೆಳೆ ಬೆಳೆದುಕೊಳ್ಳಲೂ ಸಹ ನೀರು ಸಿಗುತ್ತಿಲ್ಲ ಎಂದು ಸೋಷಿಯಲ್ ಸೈನ್ಸ್ & ಮೆಡಿಸಿನ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿ ತಿಳಿಸುತ್ತದೆ.
ಆಫ್ರಿಕಾದ ಸಹರಾ ಪ್ರದೇಶದಲ್ಲಿ ವಾಸಿಸುವ ಜನತೆಗೆ ಪೈಕಿ ಕೇವಲ 12% ಮಂದಿಗೆ ಮಾತ್ರವೇ ತಂತಮ್ಮ ಮನೆಗಳಿಗೆ ಪೈಪ್‌ಲೈನ್ ಮೂಲಕ ನೀರು ಸಿಗುತ್ತಿದ್ದು, ಮಹಿಳೆಯರು 18 ಕೆಜಿಯಷ್ಟು ಕಂಟೇನರ್‌ಗಳನ್ನು ಹೊತ್ತುಕೊಂಡು ನೀರು ತರಲು ಹೋಗುವಂತ ಪರಿಸ್ಥಿತಿ ಇದೆ.